







ಬಾರ್ಯ: ಬಾರ್ಯ ಕುಂಟಾಲ್ ಕಟ್ಟೆ ಆದಿಶಕ್ತಿ ಗೆಳೆಯರ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಸದಸ್ಯರ ಸರ್ವಾನುಮತದಿಂದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ದಯಾನಂದ ಆಲಡ್ಕ, ಉಪಾಧ್ಯಕ್ಷರಾಗಿ ನವೀನ ಗೌಡ ಮಜಿಕುಡೆ, ಕಾರ್ಯದರ್ಶಿಯಾಗಿ ಲೋಕೇಶ್ ಗೌಡ ಕುರುಡಂಗೆ, ಜೊತೆ ಕಾರ್ಯದರ್ಶಿಯಾಗಿ ರಮೇಶ್ ಮನಿಲ, ಪ್ರಕಾಶ್ ಪಂಚಲಜೆ, ಕೋಶಾಧಿಕಾರಿಯಾಗಿ ದಯಾನಂದ ಪೂಜಾರಿ ಆಲಡ್ಕ ಅವರನ್ನು ಆಯ್ಕೆ ಮಾಡಲಾಯಿತು.


ಸಂಘದ ಗೌರವ ಸಲಹೆಗಾರರಾಗಿ ಶಿವರಾಮ ಕೆಳಗಿನ ಅಂಗಡಿ, ಸುದರ್ಶನ್ ಕೆಮನಬೆಟ್ಟು, ಚೇತನ್ ಅದಮ್ಮ, ಸುರೇಶ್ ಪೂಜಾರಿ ಮಜಿಕುಡೆ ಹಾಗೂ ಸಂತೋಷ್ ಆಲಡ್ಕ ಅವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಸದಸ್ಯರು ಸಂಘದ ಮುಂದಿನ ಕಾರ್ಯಕ್ರಮಗಳು ಹಾಗೂ ಸಮಾಜಮುಖಿ ಚಟುವಟಿಕೆಗಳ ಕುರಿತು ಚರ್ಚಿಸಿ, ಸಂಘವನ್ನು ಇನ್ನಷ್ಟು ಬಲಪಡಿಸುವ ಸಂಕಲ್ಪ ವ್ಯಕ್ತಪಡಿಸಿದರು.









