ಬೆಳ್ತಂಗಡಿ : ಉಜಿರೆ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರ ವತಿಯಿಂದ ಶಿಕ್ಷಣದ ಮೇಲೆ ಸಾಮಾಜಿಕ ಜಾಲತಾಣದ ಪರಿಣಾಮ ಬಗ್ಗೆ ಕುರಿತು ವಿಶೇಷ ಉಪನ್ಯಾಸ

0

ಬೆಳ್ತಂಗಡಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕೇಂದ್ರ ಉಜಿರೆ ಇದರ ಸಮಾಜ ಕಾರ್ಯ ವಿಭಾಗದ ವತಿಯಿಂದ ನಡೆದ ಮಾ 07 ರಂದು “ಶಿಕ್ಷಣದ ಮೇಲೆ ಸಾಮಾಜಿಕ ಜಾಲತಾಣದ ಪರಿಣಾಮ “* ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಲಾಯಿಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಎಸ್.ಡಿ.ಎಂ. ಸಿ ಅಧ್ಯಕ್ಷೆ ಮಮತಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಡ ಸರಕಾರಿ ಪದವಿ ಪೂರ್ವ ಕಾಲೇಜು ಪ್ರಾoಶುಪಾಲೆ ಲಿಲ್ಲಿ ಪಿ.ವಿ ಮಾತನಾಡಿ ಪೋಷಕರು ಮಕ್ಕಳಿಗೆ ಧನಾತ್ಮಕ ವಾತಾವರಣವನ್ನು ನೀಡಿ ಮುಕ್ತವಾಗಿ ಬೆರೆಯುವಂತಹ ಅವಕಾಶ ಕಲ್ಪಿಸಿದರೆ ಮಕ್ಕಳು ಎಂದಿಗೂ ಸಮಾಜ ವಿರೋಧಿಗಲಾಗುವುದಿಲ್ಲ. ಸಾಮಾಜಿಕ ಜಾಲತಾಣವು ಒಂದು ವಿಫುಲ ಅವಕಾಶವಾಗಿದ್ದು ಮಕ್ಕಳ ಬಗ್ಗೆ ಪೋಷಕರು ಗಮನ ಹರಿಸುವುದು ಅನಿವಾರ್ಯ ವೆಂದು ತಿಳಿಸಿದರು.

ಅಧ್ಯಕ್ಷತೆಯನ್ನು ಲಾಯಿಲ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಯೋಗೀಶ್ ಬಿ ವಹಿಸಿದ್ದರು ಸಮಾಜ ಕಾರ್ಯ ವಿಭಾಗದ ವಿಧ್ಯಾರ್ಥಿಗಳಾದ ಅಖಿಲೇಶ್, ಬಿಂದು ಬಿ ಆರ್. ಸ್ಮೃತಿ ಆರ್, ಹರ್ಷಿತಾ ಕೆ ಎಸ್ ರವರು ಕಾರ್ಯಕ್ರಮವನ್ನು ಆಯೋಜಿಸಿ ನಡೆಸಿಕೊಟ್ಟರು.

LEAVE A REPLY

Please enter your comment!
Please enter your name here