







ಪದ್ಮುಂಜ: ಇಲ್ಲಿಯ ಕ್ರಷಿಪತ್ತಿನ ಸಹಕಾರಿ ಸಂಘದಲ್ಲಿ ಹಲವು ವರ್ಷಗಳಿಂದ ಪಡಿತರ ವಿತರಕರಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಣಿಯೂರು ಬಂದಾರು ಮುಗ್ರು ಗ್ರಾಮದ ವ್ಯಾಪ್ತಿಯ ಪಡಿತರ ಬಳಕೆದಾರರ ಪ್ರೀತಿಗೆ ಪಾತ್ರರಾಗಿದ್ದ ಚಿದಾನಂದ ಗೌಡರು ಮಾರ್ಚ್ 8 ಆದಿತ್ಯವಾರ ರಜೆ ಇದ್ದ ಕಾರಣ ಯಾವುದೋ ಖಾಸಗಿ ಕಾರ್ಯಕ್ರಮದ ಪ್ರಯುಕ್ತ ತೆರಳಿದ್ದ ಇವರು, ಮಂಗಳೂರಿನಿಂದ ಉಪ್ಪಿನಂಗಡಿಗೆ ಬರುವ ರಸ್ತೆಯಲ್ಲಿ ಬೋಲಾರ ಪೆಟ್ರೋಲ್ ಪಂಪು ಸಮೀಸ ಇವರು ಚಲಿಸುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾದ ಕಾರಣ ಇವರಿಗೆ ಗಂಭೀರವಾಗಿ ಗಾಯಗೊಂಡ್ಡಿದ್ದು ಆಸ್ಪತ್ರೆಗೆ ಸಾಗಿಸುವ ದಾರಿ ಮದ್ಯದಲ್ಲಿಯೇ ಮ್ರತಪಟ್ಟಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಾನೋನಿನ ವಿಧಿವಿಧಾನಗಳನ್ನು ಮುಗಿಸಿ ಸಾರ್ವಜನಿಕ ಸಂದರ್ಶನಕ್ಕಾಗಿ ರಾತ್ರಿ 11 30 ಕ್ಕೆ ಪದ್ಮುಂಜ ಸಿ ಎ ಬ್ಯಾಂಕ್ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.



ಬೆಳ್ತಂಗಡಿ ಶಾಸಕ ಹರೀಶ್ ಪೂಂಜ. ಸಿ ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ. ಕಾರ್ಯನಿರ್ವಾಹಣಾಧಿಕಾರಿ ಅಂಕಿತಾ ಮಾಜಿ ಅಧ್ಯಕ್ಷರುಗಳು ನಿವೃತ್ತ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಅಂತಿಮ ನಮನ ಸಲ್ಲಿಸಿದರು.









