







ವೇಣೂರು: ವೇಣೂರು ಶ್ರೀ ದಿಗಂಬಗರ ಜೈನ ತೀರ್ಥ ಕ್ಷೇತ್ರ ಸಮಿತಿ ಕೋಶಾಧಿಕಾರಿಯಾಗಿ ಹಲವಾರು ವರ್ಷಗಳ ಕಾಲ ಸೇವೆ ನೀಡಿ ಮಹಾಮಸ್ತಕಾಭಿಷೇಕದ ಯಶಸ್ವಿಗೆ ಶ್ರಮಿಸಿದ್ದ ಬಜಿರೆ ಗ್ರಾಮದ ಸುರಭಿ ಮನೆ ಬಿ. ರತ್ನವರ್ಮ ಇಂದ್ರ (80 ವ ) ಮಾ. 3 ರಂದು ನಿಧನರಾದರು.


ವೇಣೂರು ಮಂಡಲ ಮಾಜಿ ಪ್ರಧಾನರಾಗಿ, ವೇಣೂರು ಸಿಎ ಬ್ಯಾಂಕ್ ಅಧ್ಯಕ್ಷರಾಗಿ ವೇಣೂರು ಜೈನ್ ಮಿಲನ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ನ ದಿಗಂಬಗರ ಜೈನ ತೀರ್ಥ ಕ್ಷೇತ್ರ ಸಮಿತಿ ಕೋಶಾಧಿಕಾರಿಯಾಗಿದ್ದರು. 2013 ಮಹಾಮಸ್ತಕಾಭಿಷೇಕ ಸಮಿತಿ ಕೋಶಾಧಿಕಾರಿಯಾಗಿ, 2024ರ ಉಪಾಧ್ಯಕ್ಷರಾಗಿ ದುಡಿದು ಮಹಾಮಸ್ತಕಾಭಿಷೇಕದ ಯಶಸ್ವಿಗೆ ಶ್ರಮಿಸಿದ್ದರು.
ಉಜಿರೆ ಎಸ್ಡಿಎಂ ಕಾಲೇಜಿನ ಪಿಯು ಪ್ರಾಂಶುಪಾಲ ಪ್ರಮೋದ್ ಕುಮಾರ್, ಮೂಡಬಿದಿರೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ಸುಧೀರ್ ಕುಮಾರ್ ಸೇರಿದಂತೆ ಮೂವರು ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.









