







ಬೆಳಾಲು : ಬೆಳಾಲು ಗ್ರಾಮ ಪಂಚಾಯತಿನ 2025-26ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಕೋರಂ ಕೊರತೆಯಿಂದಾಗಿ ಮುಂದೂಡಲಾಗಿಯಿತು.



ಫೆ. 26 ರಂದು ಕರೆದಿದ್ದ ಸಭೆ ಪ್ರಾರಂಭವಾಗುವಂತೆ ಗ್ರಾ. ಪಂ.ಮಾಜಿ ಸದಸ್ಯ ದಯಾನಂದ ಪಿ. ಮಾತನಾಡಿ ಇಂದಿನ ಗ್ರಾಮ ಸಭೆಯ ಆಮಂತ್ರಣ ಸರಿಯಾಗಿ ಗ್ರಾಮಸ್ಥರಿಗೆ ತಲುಪಲಿಲ್ಲ ಅಲ್ಲದೆ ಸರಿಯಾದ ರೀತಿಯಲ್ಲಿ ಪ್ರಕಟಣೆ ನೀಡದೇ ಇದ್ದುದರಿಂದ ಗ್ರಾಮಸ್ಥ ಬರಲಿಲ್ಲ ಅಲ್ಲದೆ ಇಲಾಖೆಯ ಅಧಿಕಾರಿಗಳು ಎಲ್ಲಾ ಬಾರದೆ ಇರುವುದರಿಂದ ಈ ಗ್ರಾಮ ಸಭೆ ನಡೆಸಿ ಗ್ರಾಮಸ್ಥರಿಗೆ ಪ್ರಯೋಜನ ಇಲ್ಲ ಸರಿಯಾದ ರೀತಿಯಲ್ಲಿ ಪ್ರಕಟಣೆ ನೀಡಿ ಗ್ರಾಮ ಸಭೆ ಮಾಡುವುದು ಉತ್ತಮ ಎಂದು ಸಲಹೆ ನೀಡಿದರು ಇದಕ್ಕೆ ಇತರ ಗ್ರಾಮಸ್ಥರು ಧ್ವನಿ ಕೂಡಿಸಿದರು ಕೊನೆಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಜಗದೀಶ್ ಎಸ್. ಗ್ರಾಮ ಸಭೆಯನ್ನು ಮುಂದೂಡಲಾಗುವುದು ಎಂದು ಘೋಷಿದರು.
ಮಾರ್ಗದರ್ಶಿ ಅಧಿಕಾರಿಯಾಗಿ ಜಿ. ಪ. ಇಂಜಿನಿಯರಿಂಗ್ ಉಪ ವಿಭಾಗದ ಸಹಾಯಕ ಕಾರ್ಯಪಾಲ ಅಭಿಯಂತರ ಜನಾರ್ದನ ಗ್ರಾಮ ಸಭೆಯಲ್ಲಿ ಭಾಗವಹಿಸಿದರು. ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಎ. ಡಿ. ವೀರಭದ್ರಪ್ಪ, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.









