






ಅನುಗ್ರಹ ಶಿಕ್ಷಣ ಸಂಸ್ಥೆಯಲ್ಲಿ ಯು.ಕೆ.ಜಿ ಮಕ್ಕಳ ಪದವಿ ಪ್ರದಾನ ಸಮಾರಂಭವು ಶಾಲಾ ಸಂಚಾಲಕ ಫಾ! ಅಬೆಲ್ ಲೋಬೊ ಅವರ ಏ ಅಧ್ಯಕ್ಷತೆಯಲ್ಲಿ ಶಾಲಾ ಸಭಾಭವನದಲ್ಲಿ ನಡೆಯಿತು.
ಯಲ್.ಕೆ.ಜಿ ಪುಟಾಣಿಗಳ ಪ್ರಾರ್ಥನಾ ನೃತ್ಯದ ನಂತರ ಯು.ಕೆ.ಜಿ. ಪುಟಾಣಿಗಳು ತಮ್ಮ ಮುಗ್ಧ ಮಾತಿನ ಮೂಲಕ ಅತಿಥಿಗಳನ್ನು ಸ್ವಾಗತಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಸಂಚಾಲಕ ಫಾ! ಅಬೆಲ್ ಲೋಬೊ ಬಹುಮಾನ ವಿತರಿಸಿದರು.



ಮುಖ್ಯ ಅತಿಥಿಗಳಾದ ಅನುಗ್ರಹ ವಿದ್ಯಾ ಸಂಸ್ಥೆಯ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಮೋನಿಕಾ ನಿಲೋಫರ್ ಡಿ’ಸೋಜ ಮಕ್ಕಳಿಗೆ ಪದವಿ ಪ್ರದಾನ ಮಾಡಿ ಮಕ್ಕಳಿಗೆ ಶುಭ ಹಾರೈಸಿದರು. ಮಕ್ಕಳಿಗೆ ಶುಭ ಹಾರೈಸುತ್ತಾ ಪದವಿ ಪ್ರದಾನ ಗೀತೆಯನ್ನು ಹಾಡಲಾಯಿತು.
ಸಂಸ್ಥೆಯ ಪ್ರಾಂಶುಪಾಲರಾದ ಫಾ! ಡಾ! ವಿಜಯ್ ಲೋಬೊ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿರುವ ಪ್ರಯುಕ್ತ ಶಾಲಾ ವತಿಯಿಂದ ಅಭಿನಂದನಾ ಸನ್ಮಾನ ನಡೆಸಲಾಯಿತು. ಸಮಾರಂಭದ ಆಧ್ಯಕ್ಷ ಫಾ! ಅಬೆಲ್ ಲೋಬೊ ಅವರು ಆಧ್ಯಕ್ಷೀಯ ಭಾಷಣ ಮಾಡುತ್ತಾ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮಕ್ಕಳಿಗೆ ಶುಭ ಕೋರಿದರು. ವೇದಿಕೆಯಲ್ಲಿದ್ದ ಎಲ್ಲಾ ಅತಿಥಿ ಅಭ್ಯಾಗತರಿಗೆ ಯಲ್.ಕೆ.ಜಿ ಪುಟಾಣಿಗಳು ಧನ್ಯವಾದವನ್ನಿತ್ತು ಕಾರ್ಯಕ್ರಮಕ್ಕೆ ಮೆರಗನ್ನು ನೀಡಿದರು.
ವಿದ್ಯಾರ್ಥಿ ಶಾಶ್ವತ್ ರಾವ್ ನಿರೂಪಿಸಿದ ಕಾರ್ಯಕ್ರಮದ ನಂತರ ಪುಟಾಣಿ ಮಕ್ಕಳಿಂದ ವೈವಿದ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ವೇದಿಕೆಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಪ್ರವೀಣ್ ವಿಜಯ್ ಡಿ’ಸೋಜ, ಕಾರ್ಯದರ್ಶಿ ಮರ್ಲಿನ್ ಡಿ’ಸೋಜ ಹಾಗೂ ಪೋಷಕ ಪ್ರತಿನಿಧಿ ಅಶ್ಮಿತಾ ಹಾಜರಿದ್ದರು. ಪೂರ್ವ ಪ್ರಾಥಮಿಕ ಸಹಶಿಕ್ಷಕಿ ಗ್ರೇಸಿ ಸಲ್ಡಾನ್ಹ, ವಿನ್ನಿ ಮರಿಯ, ಅಕ್ಷತಾ, ಪ್ರಣೀತಾ ಪೆರಾವೊ ಹಾಗೂ ಗೀತಾ ಕಾರ್ಯಕ್ರಮಕ್ಕೆ ಸಹಕರಿಸಿದರು.









