ಪತ್ರಕರ್ತ ಲಕ್ಷ್ಮೀ ಮಚ್ಚಿನರಿಗೆ ಉದಯವಾಣಿಯ ಮಣಿಪಾಲದ ಡೆಪ್ಯುಟಿ ಚೀಫ್ ಸಬ್ ಎಡಿಟರ್ ಆಗಿ ಮುಂಭಡ್ತಿ

0

ಬೆಳ್ತಂಗಡಿ: ಇಲ್ಲಿನ ಮಚ್ಚಿನದ ಬರಹಗಾರ,ಪತ್ರಕರ್ತ ಲಕ್ಷ್ಮೀ ಮಚ್ಚಿನ ಹುದ್ದೆಯಲ್ಲಿ ಮುಂಭಡ್ತಿ ಪಡೆದಿದ್ದಾರೆ.

ಕಳೆದ ಎಂಟು ವರ್ಷಗಳಿಂದ ಕುಂದಾಪುರ ತಾಲೂಕಿನಲ್ಲಿ ಉದಯವಾಣಿಯ ಉಪ ಮುಖ್ಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮೀ ಮಚ್ಚಿನರವರಿಗೆ ಇದೀಗ ಉದಯವಾಣಿಯ ಮಣಿಪಾಲ ಕಚೇರಿಗೆ ಡೆಪ್ಯುಟಿ ಚೀಫ್ ಸಬ್ ಎಡಿಟರ್ ಆಗಿ ಮುಂಭಡ್ತಿ ಪಡೆದು, ವರ್ಗಾವಣೆಯಾಗಿದ್ದಾರೆ.

ಫೆ.24 ರಂದು ಕುಂದಾಪುರ ಉದಯವಾಣಿ ಕಚೇರಿಯಿಂದ ಸಹೋದ್ಯೋಗಿಗಳು ಆಪ್ತವಾಗಿ ಬೀಳ್ಕೋಟ್ಟರು, ಈ ವೇಳೆ ಕುಂದಾಪುರ ಕೋಡಿ ಭಾಗದ ಗ್ರಾಮಸ್ಥರು ಮಚ್ಚಿನರನ್ನು ಸನ್ಮಾನಿಸಿ ಬೀಳ್ಕೊಟ್ಟರು.ಇದಕ್ಕೂ ಹಿಂದೆ ಹತ್ತು ವರ್ಷಗಳ ಕಾಲ ಬೆಳ್ತಂಗಡಿಯಲ್ಲಿ ವರದಿಗಾರರಾಗಿ,ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು.

LEAVE A REPLY

Please enter your comment!
Please enter your name here