ಜೆಇಇ ಮೈನ್ಸ್ ನಲ್ಲಿ ಅಮೋಘ ಸಾಧನೆ ಮಾಡಿದ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ: ಮೌರ್ಯ ವೈ.ಡಿ., ಸ್ವಸ್ತಿಕ್ ಎಂ., ಅಕ್ಷಯ್ ಎ. ಅವರಿಗೆ ತಲಾ ರೂ.1ಲಕ್ಷ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ

0

ಗುರುವಾಯನಕೆರೆ: ರಾಷ್ಟ್ರ ಮಟ್ಟದ ಅತ್ಯುನ್ನತ ತಾಂತ್ರಿಕ ಶಿಕ್ಷಣ ಸಂಸ್ಥೆಗಳಾಗಿರುವ ಐಐಟಿ, ಎನ್‌ಐಐಟಿ, ಐಐಐಟಿ ಪ್ರವೇಶಾತಿಗಾಗಿ ನಡೆಯುವ ಜೆಇಇ ಮೈನ್ಸ್ ಫೇಸ್-1 ಫಲಿತಾಂಶದಲ್ಲೂ ಅಪೂರ್ವ ಸಾಧನೆ ಮಾಡಿದ ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಫೆ.21ರಂದು ಕಾಲೇಜಿನ ಅರಮಲೆಬೆಟ್ಟ ಕ್ಯಾಂಪಸ್ ನಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಗೌರವಿಸಲಾಯಿತು. ಎಕ್ಸೆಲ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾ‌ರ್ ಜೈನ್ ಅವರು ಅಭಿನಂದನಾ ಸಮಾರಂಭ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಮಾರಂಭದಲ್ಲಿ 99.6691 ಪರ್ಸೆಂಟೇಲ್ ಪಡೆದು ಜಿಲ್ಲೆಯಲ್ಲಿಯೇ ಅಗ್ರಸ್ಥಾನಿಯಾದ ಮೌರ್ಯ ವೈ.ಡಿ., 99.4965 ಪರ್ಸೆಂಟೇಲ್ ಪಡೆದ ಸ್ವಸ್ತಿಕ್ ಎಂ., 99.3081 ಪರ್ಸೆಂಟೇಲ್ ಪಡೆದ ಅಕ್ಷಯ್ ಎ. ಅವರಿಗೆ ತಲಾ ರೂ.1 ಲಕ್ಷ ನಗದು ಪುರಸ್ಕಾರ ನೀಡುವ ಮೂಲಕ ಗೌರವಿಸಿಸಲಾಯಿತು.

ಜೊತೆಗೆ 98 ಶೇ. ಕ್ಕಿಂತಲೂ ಅಧಿಕ ಅಂಕ ಗಳಿಸಿದ ಅಭಿನವ ಕೆ. ಮಯ್ಯ, ತೇಜಲ್ ವಿ. ವಾಂಟರ್ಕರ್, ಸಮ್ಯಕ್ ವಿನಯ್, ಶಮಿತ್ ಗೌಡ ಎ.ಎಸ್., ಕೆ.ಕೆ. ಸಾರ್ವಿಕಾ, ಶಶಾಂಕ್ ಗೌಡ ಆರ್, ಯಶಸ್ ಗೌಡ ಎನ್., ಯಶಸ್ ಜಿ.ಎಸ್. ಅವರನ್ನು ಹಾಗೂ ಇತರ ಸಾಧಕ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡುವ ಮೂಲಕ ಗೌರವಿಸಲಾಯಿತು.

ವೇದಿಕೆಯಲ್ಲಿ ಪ್ರಾಂಶುಪಾಲ ಡಾ. ನವೀನ್ ಕುಮಾರ್ ಮರಿಕೆ, ಡಾ| ಪ್ರಜ್ವಲ್, ಶೈಕ್ಷಣಿಕ ಸಂಯೋಜಕರಾದ ಶ್ರೀನಿಧಿ, ನಿಶಾ ಹಾಗೂ ಜೆಇಇ ಉಪನ್ಯಾಸಕರಾದ ಸುರೇಶ್ ಬಾಬು, ಪ್ರವೀಣ್ ಪಂಡಿತ್, ಬಿರಾದಾರ್ ಹಾಗೂ ನೀಟ್ ಉಪನ್ಯಾಸಕ ವಿಲ್ಸನ್ ಹಾಗೂ ಆಡಳಿತ ಮಂಡಳಿಯವರು, ಬೋಧಕ-ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here