






ಬೆಳ್ತಂಗಡಿ: ಪಟ್ಟೂರು ಗ್ರಾಮದ ಪಟ್ಟೂರಿನ ಶ್ರೀರಾಮ ವಿದ್ಯಾಸಂಸ್ಥೆಯ ವೇದವ್ಯಾಸ ಧ್ಯಾನ ಮಂಟಪದಲ್ಲಿ ಫೆ 16 ರಂದು ಸಪ್ತಶಕ್ತಿ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅತಿಥಿಗಳಿಗೆ ಮತ್ತು ಮಾತೆಯರಿಗೆ ಆರತಿ ಬೆಳಗಿ ಅರಿಶಿನ ಕುಂಕುಮ ಹೂವನ್ನು ನೀಡಿ ಭಾರತ ಮಾತೆಗೆ ಪುಷ್ಪಾರ್ಚನೆಯನ್ನು ಮಾಡಿಸಿ ಸ್ವಾಗತಿಸಲಾಯಿತು.

ಅತಿಥಿಗಳಿಂದ ದೀಪ ಪ್ರಜ್ವಲನೆ ಮಾಡಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಭಾರತಮಾತೆ ಹಾಗೂ ವೀರವನಿತೆಯರಾ ದ ಕಿತ್ತೂರು ರಾಣಿ ಚೆನ್ನಮ್ಮ, ಸಾವಿತ್ರಿಬಾಯಿ ಫುಲೆ, ಸಾಲುಮರದ ತಿಮ್ಮಕ್ಕ, ಜಾನ್ಸಿ ರಾಣಿ ಲಕ್ಷ್ಮೀಬಾಯಿ, ಒನಕೆ ಓಬವ್ವ, ರಾಣಿ ಅಬ್ಬಕ್ಕ, ಲತಾ ಮಂಗೇಶ್ಕರ್, ಕಮಲಾಬಾಯಿ ಚಟೋಪಾಧ್ಯಾಯ, ಜೀಜಾಬಾಯಿ, ಸರೋಜಿನಿ ನಾಯ್ಡು, ಅಕ್ಕಮಹಾದೇವಿ ಇವರ ಪಾತ್ರವನ್ನು ಅಭಿನಯಿಸಿ ಅವರ ಸಾಧನೆಯನ್ನು ತಿಳಿಯಪಡಿಸುವುದರೊಂದಿಗೆ ಮಹಾನ್ ವೀರ ವನಿತೆಯರ ಪರಿಚಯವನ್ನು ಮಾಡಿದರು.
ವಿದ್ಯಾ ಸಂಸ್ಥೆಯ ವಿದ್ಯಾರ್ಥಿನಿ ಎ ಆರ್ ಕಲ್ಯಾಣಿ ಹಾಡಿದ ಗಣಪತಿ ಸ್ತುತಿಯೊಂದಿಗೆ ಪ್ರಾರಂಭಿಸಲಾಯಿತು. ನಂತರ ಶ್ರೀರಾಮ ವಿದ್ಯಾ ಸಂಸ್ಥೆ ಪಟ್ಟೂರಿನ ಮಾತೃ ಭಾರತಿಯ ಕಾರ್ಯದರ್ಶಿ ವಿನಂತಿನಿ ವೇದಿಕೆಯಲ್ಲಿರುವ ಗಣ್ಯರನ್ನು ಸ್ವಾಗತಿಸಿ, ಮಾತೆಯರಿಗೆ ಸಪ್ತಶಕ್ತಿ ಸಂಗಮದ ಆದರ್ಶಗಳನ್ನು ಹೇಳುವುದರ ಮೂಲಕ ಪ್ರಾಸ್ತಾವಿಕ ನುಡಿಗಳನ್ನು ಆಡಿದರು.


ಕಾರ್ಯಕ್ರಮಕ್ಕೆ ವಕ್ತಾರರಾಗಿ ಆಗಮಿಸಿದ ಲೇಖಕರು, ಪ್ರಗತಿಪರ ಚಿಂತಕರು ರೇಣುಕಾ ಸುಧೀರ್ ಮಹಿಳೆಯಲ್ಲಿ ಸಪ್ತಶಕ್ತಿಗಳಾದ ಕೀರ್ತಿ,ಐಶ್ವರ್ಯ, ವಾಕ್ ಶಕ್ತಿ, ಸ್ಮರಣ ಶಕ್ತಿ, ಬುದ್ಧಿಶಕ್ತಿ, ದೃಢತೆ ಮತ್ತು ತಾಳ್ಮೆ ಇವು ಮಹಿಳೆಯರ ಸದ್ಗುಣಗಳು. ಇವುಗಳನ್ನು ಜಾಗೃತಗೊಳಿಸಿಕೊಂಡು ಸಮೃದ್ಧ ಭಾರತಕ್ಕಾಗಿ ಹಾಗೂ ಸಾಮಾಜಿಕ ಪರಿವರ್ತನೆಗಾಗಿ ನಾವೆಲ್ಲರೂ ಸಂಕಲ್ಪ ಮಾಡಬೇಕು. ಮಹಿಳೆಯಲ್ಲಿ ಕೇವಲ ಏಳು ಶಕ್ತಿ ಮಾತ್ರವಲ್ಲದೆ ಕರ್ತತ್ವ ಶಕ್ತಿ, ನೇತೃತ್ವ ಶಕ್ತಿ ಮತ್ತು ಮಾತೃತ್ವ ಶಕ್ತಿಗಳು ಇವೆ. ನಮ್ಮಲ್ಲಿರುವ ಪ್ರತಿಭೆಯನ್ನು ನಾವು ಪ್ರೋತ್ಸಾಹಿಸಬೇಕು ಆಗ ನಮ್ಮ ಮಕ್ಕಳು ಅದನ್ನು ನೋಡಿ ಕಲಿಯುತ್ತಾರೆ. ಸಪ್ತಶಕ್ತಿ ಸಂಗಮದ ಮೂಲಕ ದೇಶ ಮತ್ತು ಪ್ರಪಂಚದ ಪ್ರಸ್ತುತ ಪರಿಸ್ಥಿತಿಗಳನ್ನು ತಿಳಿದುಕೊಂಡು ನಮ್ಮ ಮಕ್ಕಳಲ್ಲಿ ಸದ್ಗುಣಗಳನ್ನು ನಾವು ಮೊದಲು ಮನೆಯಲ್ಲೇ ಬೆಳೆಸಬೇಕು. ಆಗ ಒಂದು ಒಳ್ಳೆಯ ಸ್ವಾಸ್ಥ ಸಮಾಜವನ್ನು ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.
ನಾಟಿ ವೈದ್ಯೆ, ಅಂಗನವಾಡಿ ಕೇಂದ್ರ ಪಟ್ಟೂರು ಇಲ್ಲಿಯ ನಿವೃತ್ತ ಸಹಾಯಕಿಯಾಗಿದ್ದ ಸೀತು, ಇನ್ನೋರ್ವ ಪಟ್ಟೂರಿನ ನಾಟಿ ವೈದ್ಯೆ ಸುಂದರಿ ಪಿತ್ತಿಲ್ತಾರು ಹಾಗೂ ಸಂಗಮ ಸಂಜೀವಿನಿ ಒಕ್ಕೂಟ ಕೊಕ್ಕಡ ಇದರ ಸದಸ್ಯೆ ಯಶೋದ ಜಗದೀಶ ಇವರನ್ನು ಸನ್ಮಾನಿಸಲಾಯಿತು. ನಂತರ ಸನ್ಮಾನಿತರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಸಪ್ತಶಕ್ತಿ ಸಂಗಮ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿರುವ ಶ್ರೀರಾಮ ವಿದ್ಯಾಸಂಸ್ಥೆ ಪಟ್ಟೂರಿನ ಆಡಳಿತ ಸಮಿತಿಯ ಸದಸ್ಯರಾಗಿರುವ ಕುಸುಮಾವತಿ ಅನಾರು ನಮ್ಮ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಮನೆಯಿಂದಲೇ ಕಲಿಸಬೇಕು. ಒಂದು ಹೆಣ್ಣು ಮನಸ್ಸು ಮಾಡಿದರೆ ಏನನ್ನು ಸಾಧಿಸಬಹುದು. ಜೀಜಾಬಾಯಿ ಶಿವಾಜಿಯನ್ನು ಬೆಳೆಸಿದರೆ ರೀತಿಯಲ್ಲಿ ನಾವು ನಮ್ಮ ಮಕ್ಕಳನ್ನು ಬೆಳೆಸಬೇಕು ಎಂದು ಹೇಳುವುದರ ಮೂಲಕ ಅಧ್ಯಕ್ಷರ ಮಾತುಗಳನ್ನು ಆಡಿದರು.
ಕಾರ್ಯಕ್ರಮದ ಕೊನೆಯ ಅಂಗವಾಗಿ ಧನ್ಯವಾದಗಳನ್ನು ಶ್ರೀರಾಮ ವಿದ್ಯಾ ಸಂಸ್ಥೆ ಪಟ್ಟೂರು ಮಾತೃ ಭಾರತಿ ಮಂಡಳಿಯ ಅಧ್ಯಕ್ಷರಾದ ದಿವ್ಯ ಇವರು ನೆರವೇರಿಸಿದರು. ವೇದಿಕೆಯಲ್ಲಿ ಶ್ರೀರಾಮ ವಿದ್ಯಾ ಸಂಸ್ಥೆಯ ಆಡಳಿತ ಸದಸ್ಯ ಹೇಮಾವತಿ ಶಿವಾನಂದ, ಶ್ರೀರಾಮ ವಿದ್ಯಾ ಸಂಸ್ಥೆಯ ಆಡಳಿತ ಸಮಿತಿ ಸದಸ್ಯ ಸೌಮ್ಯ ಕೊಡಂಚಡ್ಕ ಮತ್ತು ಶ್ರೀರಾಮ ವಿದ್ಯಾ ಸಂಸ್ಥೆ ಪಟ್ಟೂರು ಇಲ್ಲಿಯ ಮಾತೃ ಭಾರತಿ ಮಂಡಳಿಯ ಅಧ್ಯಕ್ಷ ದಿವ್ಯ ಉಪಸ್ಥಿತರಿದ್ದರು.ಶ್ರೀರಾಮ ವಿದ್ಯಾ ಸಂಸ್ಥೆ ಪಟ್ಟೂರು ಸಹ ಶಿಕ್ಷಕಿ ಮೇಘಶ್ರೀ ಕಾರ್ಯಕ್ರಮವನ್ನು ನಿರೂಪಿಸಿದರು.









