ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ 16 ನೇ ವರ್ಷದ ಸುವರ್ಣ ರಂಗ ಸನ್ಮಾನ

0

ಬೆಳ್ತಂಗಡಿ : ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಪ್ರಯುಕ್ತ ಫೆ. 19 ರಂದು ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ 16ನೆ ವರ್ಷದ ಸಾಂಸ್ಕೃತಿಕ ವೈಭವ ಮತ್ತು ಸಾಂಸ್ಕೃತಿಕ ಕಲಾ ಸಾಧಕರಿಗೆ ‘ಸುವರ್ಣ ರಂಗ ಸಮ್ಮಾನ 2026’ ಪ್ರಶಸ್ತಿ ಪ್ರದಾನ ಸಮಾರಂಭ ಜರಗಿತು.

ಸಮಾರಂಭದಲ್ಲಿ ಈ ವರ್ಷದ ರಂಗ ಸನ್ಮಾನಕ್ಕೆ ಪಾತ್ರರಾದ ಯುವ ಸಿನಿಮಾ ಛಾಯಾಗ್ರಹಣ ಸೊಂತೋಷ್ ಆಚಾರ್ಯ ಗುಂಪಲಾಜೆ, ಹಿರಿಯ ಯಕ್ಷಗಾನ ಕಲಾವಿದ ಕೊಳ್ತಿಗೆ ನಾರಾಯಣ ಗೌಡ, ಧಾರ್ಮಿಕ ಮುಖಂಡ ವೈದ್ಯ ಡಾ. ಪ್ರದೀಪ್ ನಾವೂರು ಇವರನ್ನು ಸುವರ್ಣ ಪ್ರತಿಷ್ಠಾನಾ ಅಧ್ಯಕ್ಷ ಸಂಪತ್ ಸುವರ್ಣ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಬಿ. ಭುಜಬಲಿ ಧರ್ಮಸ್ಥಳ, ಬಳ್ಳಮಂಜ ದೇವಸ್ಥಾನ ಆಡಳಿತ ಮೊಕ್ತೇಸರ ಹರ್ಷ ಸಂಪಿಗೆತ್ತಾಯ, ಸುವರ್ಣ ಆರ್ಕೇಡ್ ಮಾಲಕ ವೈ. ನಾಣ್ಯಪ್ಪ ಪೂಜಾರಿ, ಗುರುದೇವ ಸೊಸೈಟಿಯ ನಿರ್ದೇಶಕಿ ಸುಜಿತಾ ವಿ. ಬಂಗೇರ, ಪ್ರಜ್ವಲ್ ಕಾಂಪ್ಲೆಕ್ಸ್‌ನ ಮಾಲಕ ಪ್ರಮೋದ್ ಆರ್. ನಾಯಕ್, ಪತ್ರಕರ್ತರಾದ ಎನ್. ಮಂಜುನಾಥ ರೈ,ತುಕರಾಮ, ಮನೋಹರ ಬಳಂಜ, ಸಂತೋಷ್ ಕೋಟ್ಯಾನ್, ಮಡಂತ್ಯಾರು ಜೆಸಿಐ ಅಧ್ಯಕ್ಷೆ ಸಾಯಿ ಸುಮ ನಾವುಡ, ಅಶೋಕ್ ಗುಂಡಲಿಕೆ, ಅಮಿತಾ ಅಶೋಕ್, ಸಂತೋಷ್ ಕುಮಾರ್, ಶಶಿಧರ್ ಕಲ್ಮಂಜ, ಬೇಬಿ ನಾನ್ಯಪ್ಪ, ವಿಜಯ ಕುಮಾರ್ ಅಳದಂಗಡಿ, ಜಯರಾಜ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.ದೀಕ್ಷಿತ್ ಗಾಣಿಗ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಮೊದಲು ಶಿವಶಂಕರ್ ಗೇರುಕಟ್ಟೆ ಸಾರಥ್ಯದಲ್ಲಿ ನಾದಂತರಂಗ ಗಾನವೈಭವ ಜರಗಿತು.

LEAVE A REPLY

Please enter your comment!
Please enter your name here