ವಿದ್ವತ್ :ಜೆ ಇ ಇ ಸಾಧಕರಿಗೆ ಕಾಲೇಜು ವತಿಯಿಂದ ಅಭಿನಂದನೆ: 35 ವಿದ್ಯಾರ್ಥಿಗಳ ಪೈಕಿ 21 ಮಂದಿ ಶೇ.90 ಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆದ ದಾಖಲೆ

0

ಉಜಿರೆ: : ಭಾರತೀಯ ಪ್ರತಿಷ್ಠಿತ ಸಂಸ್ಥೆಗಳಾದ ಎನ್‌ಐಟಿ ಹಾಗೂ ಐಐಐಟಿ ಪ್ರವೇಶಕ್ಕೆ ಅವಕಾಶ ಕಲ್ಪಿಸುವ ಜೆಇಇ (ಮೇನ್ಸ್)- 2026 ಪರೀಕ್ಷೆಯಲ್ಲಿ ಅದ್ವಿತೀಯ ಸಾಧನೆ ತೋರಿದ ಗುರುವಾಯನಕೆರೆ ವಿದ್ವತ್ ಪಿ ಯು ಕಾಲೇಜಿನ ವಿದ್ಯಾರ್ಥಿ ಚಿನ್ಮಯ್ ಜಿ.ಕೆ. ಹಾಗೂ ಪ್ರತೀಕ್ ವಿ.ಎಸ್. ಅವರನ್ನು ವಿದ್ವತ್ ಕಾಲೇಜು ಪ್ರತಿಷ್ಠಾನದಿಂದ ಫೆ.17 ರಂದು ಸನ್ಮಾನಿಸಿ ಗೌರವಿಸಲಾಯಿತು.

ಚಿನ್ಮಯ್ ಜಿ.ಕೆ. ಶೇ.99.6465 ಫಲಿತಾಂಶ ದಾಖಲಿಸಿದ್ದು, ಪ್ರತೀಕ್ ವಿ.ಎಸ್. ಶೇ.99.5473 ಪರ್ಸೆಂಟೈಲ್ ಪಡೆದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸಾಧನೆಯನ್ನು ಪರಿಗಣಿಸಿ ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ, ಕಾರ್ಯದರ್ಶಿ ಪ್ರಜ್ವಲ್ ರೈ ಅವರ ಮನೆಗೆ ತೆರಳಿ ಅಭಿನಂದಿಸಿ ಭವಿಷ್ಯದಲ್ಲಿ ಇನ್ನಷ್ಟು ಸಾಧನೆ ಮಾಡುವಂತೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಚಿನ್ಮಯ್ ಜಿ.ಕೆ. ಪೋಷಕರಾದ ಗಣೇಶ್ ಭಟ್, ಮಾಲಿನಿ ಹೆಗಡೆ, ಪ್ರತೀಕ್ ವಿ.ಎಸ್. ಪೋಷಕರಾದ ವಸಂತ್ ಶೆಟ್ಟಿ, ಶಾಲಿನಿ ವಿ.ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.

ವಿದ್ವತ್ ಕಾಲೇಜಿನಿಂದ ಪ್ರಥಮ ಬಾರಿಗೆ ಜೆಇಇ ಪರೀಕ್ಷೆಗೆ ಹಾಜರಾದ 35 ವಿದ್ಯಾರ್ಥಿಗಳ ಪೈಕಿ ಚಿನ್ಮಯ್ ಜಿ.ಕೆ., ಹಾಗೂ ಪ್ರತೀಕ್ ವಿ.ಎಸ್. ಶೇ.99 ಪರ್ಸೆಂಟೈಲ್ ಪಡೆದು ರಾಜ್ಯದಲ್ಲೇ ಗರಿಷ್ಠ ಸಾಧನೆ ತೋರಿದ್ದು, ಉಳಿದಂತೆ 21 ಮಂದಿ ಶೇ.90 ಕ್ಕಿಂತ ಅಧಿಕ ಪರ್ಸೆಂಟೈಲ್ ಪಡೆಯುವ ಮೂಲಕ ಚೊಚ್ಚಲ ಪ್ರಯತ್ನದಲ್ಲಿ ವಿಶೇಷ ಸಾಧನೆ ಮಾಡಿದ ರಾಜ್ಯದ ಏಕೈಕ ಕಾಲೇಜೆಂಬ ಹೆಗ್ಗಳಿಕೆ ಪಾತ್ರವಾಗಿದೆ.ಈ ವೇಳೆ ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಮಂಡಗಳಲೆ, ಆಡಳಿತಾಧಿಕಾರಿ ಅಶೋಕ ಕುಮಾರ್ ಶೆಟ್ಟಿ, ಪ್ರಾಂಶುಪಾಲ ಹರೀಶ್ ಕೆ.ಆರ್., ಉಪನ್ಯಾಸಕರಾದ ಪ್ರತಾಪ್ ದೊಡ್ಡಮನೆ, ರಂಗನಾಥ್ ಆರ್., ಪಿ.ಆರ್‌.ಒ ಚೈತ್ರೇಶ್ ಸಿ. ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here