






ಉಜಿರೆ; ಉಜಿರೆ ಶ್ರೀ ಜನಾರ್ದನ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆಯಲಿರುವ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳ ಕುರಿತು ಸಾಂಸ್ಕೃತಿಕ ಹಾಗು ಸಭಾ ಕಾರ್ಯಕ್ರಮ ಸಮಿತಿ ಸಭೆಯು ಫೆ 18 ರಂದು ಶ್ರೀ ಶಾರದಾ ಮಂಟಪದಲ್ಲಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯರ ನೇತೃತ್ವದಲ್ಲಿ ಸಮಿತಿ ಸಂಚಾಲಕ ಡಾ!ಶ್ರೀಧರ ಭಟ್ ,ಸಹಸಂಚಾಲಕ ಪ್ರಸಾದ್ ಬಿ. ಎಸ್ ಅವರ ಉಪಸ್ಥಿತಿಯಲ್ಲಿ ನಡೆಯಿತು. ಶರತ್ ಕೃ ಷ್ಣ ಪಡುವೆಟ್ನಾಯರು ಮಾತನಾಡಿ ಸಾಂಸ್ಕೃತಿಕ ಹಾಗು ಸಭಾ ಕಾರ್ಯಕ್ರಮ ಸಮಿತಿ ಅತಿ ಮುಖ್ಯ ಹಾಗು ಜವಾಬ್ದಾರಿಯುತವಾದುದು . ಸಮಿತಿಯಲ್ಲಿ ಎಲ್ಲರೂ ವಿಶೇಷವಾಗಿ ಅನುಭವವಿರುವವರು. ಕ್ಷೇತ್ರದ ಅನುಭವದ ಹಿನ್ನೆಲೆಯಲ್ಲಿ ಎಲ್ಲ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಡುವ ವಿಶ್ವಾಸ ಹಾಗು ಧೈರ್ಯವಿದೆ.ಒಟ್ಟಿನಲ್ಲಿ ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳು ಶ್ರೀ ದೇವರ ಪೂರ್ಣ ಅನುಗ್ರಹ ಹಾಗು ಎಲ್ಲರ ಸಹಕಾರದಿಂದ ನಭೂತೋ ನ ಭವಿಷ್ಯತಿಯೆಂಬಂತೆ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರವಿರಲಿ ಎಂದು ಆಶಿಸಿದರು.

ಮಾ 2 ರಂದು ಬೆಳಿಗ್ಗೆ ವಿವಿಧ ಕಾರ್ಯಾಲಯಗಳ ಉದ್ಘಾಟನೆ ನಡೆದು ಬೆಳಿಗ್ಗೆ 1೦ಕ್ಕೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸಬಾ ಕಾರ್ಯಕ್ರಮ ನಡೆಯಲಿದೆ. ಮಾ 3 ರಂದು ಗ್ರಹಣ ಪ್ರಯುಕ್ತ ಸಭಾ ಕಾರ್ಯಕ್ರಮವಿರುವುದಿಲ್ಲ. .ಮಾ 4 ರಂದು ವಿಜಯಗೋಪುರ ಲೋಕಾರ್ಪಣೆ ಪ್ರಯುಕ್ತ ಬೆಳಿಗ್ಗೆ 1೦ಕ್ಕೆ ಸುದರ್ಶನ ಸಭಾಭವನದಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಇತರ ಎಲ್ಲ ದಿನಗಳಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ಸಂಜೆ 4.3೦ ರಿಂದ ಸುದರ್ಶನ ಸಭಾಭವನದಲ್ಲಿ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮ : ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ಸ್ಥಳೀಯ ಕ ಲಾವಿದರ ಪ್ರಾಯೋಜಿತ ಕಾರ್ಯಕ್ರಮಗಳು ಮಾ 2 ರಿಂದ 11 ರವರೆಗೂ ನಡೆಯಲಿದೆ. ಮಾ 4 ರಂದು ಸುದರ್ಶನ ಸಭಾಭವನ ದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಜೆ 6ಕ್ಕೆ ಡಾ!ಮೋಹನ ಆಳ್ವರು ಉದ್ಘಾಟಿಸಲಿದ್ದು ಮಾ 11 ರ ವರೆಗೆ ಖ್ಯಾತ ಕಲಾವಿದರ ಕಾರ್ಯಕ್ರಮಗಳು ನಡೆಯಲಿವೆ. ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳ ಸಭಾ ನಿರ್ವಹಣೆ, ಗಣ್ಯ ಅತಿಥಿಗಳು,ಕಲಾವಿದರಿಗೆ ಸ್ಮರಣಿಕೆ ನೀಡುವ ಜವಾಬ್ದಾರಿಯನ್ನು ಹಂಚಲಾಯಿತು. ಸ್ವಾಗತ, ಗೌರವಾರ್ಪಣೆ,ಸನ್ಮಾನಕ್ಕೆ ಬೇಕಾದ ಪರಿಕರಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳಲು ಸೂಚಿಸಲಾಯಿತು. ವಿವಿಧ ವಿಚಾರಗಳ ಕುರಿತು ಚರ್ಚೆ ,ವಿಮರ್ಶೆ ನಡೆದು ಅಂತಿಮ ನಿರ್ಧಾರ ಕೈಗೊಳ್ಳಲಾಯಿತು. ಸಮಿತಿ ಸದಸ್ಯರಾದ ಡಾ!ಕುಮಾರ ಹೆಗ್ಡೆ,ಡಾ! ಮಹೇಶ್ ಕುಮಾರ್ ಶೆಟ್ಟಿ,ಸುನಿಲ್ ಪಂಡಿತ್, ಸೋಮಶೇಖರ ಶೆಟ್ಟಿ , ಜಯರಾಮ ಶೆಟ್ಟಿ, ದಿವಾ ಕೊಕ್ಕಡ, ದೀಕ್ಷಿತ್ ರೈ, ರಮೇಶ್ ಮಯ್ಯ, ಅಭಿಲಾಷ್ ಕೆ ಎಸ್ , ವಿದ್ಯಾಶ್ರೀ ಅಡೂರು,ಆಶಾ ಅಡೂರು, ಸುಮಾ ಶ್ರೀನಾಥ್, ರಾಮಕೃಷ್ಣ ಭಟ್,ಮೇಧಾ, ಭವ್ಯ ಹೊಳ್ಳ, ಶ್ರೀನಿ ವಾಸ ತಂತ್ರಿ, ಮತ್ತಿತರರು ಉಪಸ್ಥಿತರಿದ್ದರು.
ಹಸಿರು ಹೊರೆ ಕಾಣಿಕೆ ಸಮಿತಿ ಸಭೆ ನಡೆದು ವಿವಿಧ ದಿನಗಳಲ್ಲಿ ವಿವಿಧ ಭಾಗಗಳಿಂದ ಹೊ ರೆಕಾಣಿಕೆ ಸಂಗ್ರಹಿಸಿ ,ಜನಾರ್ದನ ಶಾಲೆ ಹಾಗು ಬೆಳಾಲ್ ಕ್ರಾಸ್ ನಿಂದ ಮೆರವಣಿಗೆಯಲ್ಲಿ ಹೊ ರೆಕಾಣಿಕೆ ಸಮರ್ಪಿಸಲು ನಿರ್ಧರಿಸಲಾಯಿತು









