ಜೆಸಿಐ ಕೊಕ್ಕಡ ಕಪಿಲಾ ಘಟಕದ ಸಾಮಾನ್ಯ ಸಭೆ ಯಶಸ್ವಿ: ಯುವ ಜೆಸಿ ಪದಗ್ರಹಣಕ್ಕೆ ಭರ್ಜರಿ ಸಿದ್ಧತೆ

0

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕದ ಫೆಬ್ರವರಿ ತಿಂಗಳ ಸಾಮಾನ್ಯ ಸಭೆ ಫೆಬ್ರವರಿ 18ರಂದು ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ, ಶಿಬರಾಜೆ ಪಾದೆ ಕಚೇರಿಯಲ್ಲಿ ಉತ್ಸಾಹಭರಿತವಾಗಿ ಜರುಗಿತು.

ಘಟಕದ ಅಧ್ಯಕ್ಷ ರಿತೇಶ್ ಎಂ. ಸ್ಟ್ರೆಲ್ಲಾ ಸಭೆಗೆ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಭೆಯಲ್ಲಿ ಭಾರತೀಯ ಯುವ ಜೆಸಿ ವಿಭಾಗದ ಪದಗ್ರಹಣ ಸಮಾರಂಭವನ್ನು ಶೀಘ್ರದಲ್ಲಿ ವೈಭವದಿಂದ ನಡೆಸಲು ತೀರ್ಮಾನಿಸಲಾಯಿತು. ಹುಟ್ಟುಹಬ್ಬ ಆಚರಿಸಿಕೊಂಡ ನಿಕಟಪೂರ್ವ ಅಧ್ಯಕ್ಷೆ ಡಾ. ಶೋಭಾ ಪಿ. ಅವರಿಗೆ ಸದಸ್ಯರಿಂದ ಅಭಿನಂದನೆಗಳು ಸಲ್ಲಿಸಲಾಯಿತು.

ಕೋಶಾಧಿಕಾರಿ ಪ್ರಜ್ವಲ್ ಲೋಬೊ ವಾರ್ಷಿಕ ಸದಸ್ಯತ್ವ ಶುಲ್ಕ ಹಾಗೂ ಘಟಕದ ಆರ್ಥಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಪೂರ್ವಾಧ್ಯಕ್ಷ ಸಂತೋಷ್ ಜೈನ್ ಅವರನ್ನು ಯುವ ಜೆಸಿ ವಿಭಾಗದ ನಿರ್ದೇಶಕರನ್ನಾಗಿ ಏಕಮತದಿಂದ ಆಯ್ಕೆ ಮಾಡಲಾಯಿತು.

ಇತ್ತೀಚೆಗೆ ನಿಧನರಾದ ಖ್ಯಾತ ವೈದ್ಯ ಡಾ. ಟಿ. ವಿ. ಜೋಸೆಫ್ ಅವರ ಗೌರವಾರ್ಥ ಮೌನ ಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.ಮುಂದಿನ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ವಲಯ ಉಪಾಧ್ಯಕ್ಷರ ಅಧಿಕೃತ ಭೇಟಿಯನ್ನು ಯಶಸ್ವಿಯಾಗಿ ಆಯೋಜಿಸಲು ಸಿದ್ಧತೆ ಕುರಿತು ಚರ್ಚಿಸಲಾಯಿತು. ಜೆಸಿ ವಾಣಿ ಹಾಗೂ ಧ್ಯೇಯ ವಾಕ್ಯವನ್ನು ಆಯುಷ್ ಜೈನ್ ವಾಚಿಸಿದರು.

ವಲಯ ಉಪಾಧ್ಯಕ್ಷ ಜಿತೇಶ್ ಎಲ್. ಪಿರೇರಾ, ಜಸ್ವಂತ್ ಪಿರೇರಾ, ರೇಷ್ಮಾ ಡಿ ಅಲ್ಮೇಡಾ ಸೇರಿದಂತೆ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಚರ್ಚೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಕಾರ್ಯದರ್ಶಿ ಜೋಯಲ್ ಪಿರೇರಾ ವಂದಿಸಿದರು.ಸಭೆಯು ಸಂಘಟನೆಯ ಏಕತೆ, ಸೇವಾಭಾವ ಮತ್ತು ಯುವ ಶಕ್ತಿಯ ಪ್ರತಿಬಿಂಬವಾಗಿ ಗಮನ ಸೆಳೆದಿತು.

LEAVE A REPLY

Please enter your comment!
Please enter your name here