







ಚಾರ್ಮಾಡಿ: ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಮತ್ತು ಆರಾಟ್ ಉತ್ಸವ ಬ್ರಹ್ಮ ಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಹಿರಿತನದಲ್ಲಿ ಫೆ. 12ರಿಂದ ನಡೆಯುತ್ತಿದ್ದು ಫೆ.14ರಂದು ಬೆಳಿಗ್ಗೆ ಗಣಹೋಮ, ಉಷಪೂಜೆ, ಪ್ರಾತ ಬಲಿ, ಸಾನಿಧ್ಯ ನವಕ ಕಲಶಾಭಿಷೇಕ, ಉತ್ಸವ ಬಲಿ,ಸಂಜೆ ದೀಪರಾಧನೆ,ದೊಡ್ಡರಂಗಪೂಜೆ ನಡೆಯಿತು ನಂತರ ನಡೆದ ಧಾರ್ಮಿಕ ಸಭೆಯಲ್ಲಿ ದ. ಕ. ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಲಕ್ಷ್ಮೀಶ ಗುಬ್ಲಡ್ಕ ಧಾರ್ಮಿಕ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಆಡಳಿತ ಮೋಕ್ತೆಸರ ಯಶೋಧರ ವಳಸರಿ ವಹಿಸಿದ್ದರು.



ಪ್ರಗತಿಪರ ಕೃಷಿಕ ಅನಂತ ರಾವ್ ಮಠದ ಮಜಲು ಶುಭ ಹಾರೈಸಿದರು. ಸಭೆಯಲ್ಲಿ ಪ್ರಗತಿಪರ ಕೃಷಿಕ ಪುಟ್ಟಣ್ಣ ಗೌಡ ಅಡಿಮಾರು ಇವರನ್ನು ಸನ್ಮಾನಿಸಲಾಯಿತು. ಸಹ ಮೋಕ್ತೆಸರರು ಅನಿತಾ ರವಿರಾಜ್ ಸ್ವಾಗತಿಸಿ, ಆಕಾಶ್ ಪೂಜಾರಿ ಗೇರುಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಅರ್ಚಕ ಶ್ರೀನಿವಾಸ್ ಉಪಾಧ್ಯಾಯ, ಸಹ ಮೋಕ್ತೆಸರುಗಳಾದ ಸುಂದರ ಆಚಾರ್ಯ, ವೀರಪ್ಪ ಗೌಡ, ಜನಾರ್ದನ ಅನ್ನಾರು, ದಿನೇಶ್ ಮೂಡಾಯಿಬೆಟ್ಟು, ಪ್ರಿಯ ಹರೀಶ್ ಬರಮೇಲು ಕಿಶೋರ್ ಸಹಕರಿಸಿದರು. ಪಾದಯತ್ರಿಗಳು ಊರ ಪರ ಊರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನಂತರ ಪಂಚಶ್ರೀ ಸಾಂಸ್ಕೃತಿಕ ಕಲಾ ಕೇಂದ್ರದ ವಿದ್ಯಾರ್ಥಿಗಳಳಿಂದ ಯಕ್ಷಗಾನ “ಪಾಂಚಜನ್ಯ”, ನಡೆಯಿತು.









