







ಧರ್ಮಸ್ಥಳ: ಮಹಾ ಶಿವರಾತ್ರಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ 50ಸಾವಿರಕ್ಕೂ ಹೆಚ್ಚು ಯಾತ್ರಾರ್ಥಿಗಳು ಪಾದಯಾತ್ರೆ ನಡೆಸುತ್ತಿದ್ದಾರೆ. ಹೀಗೆ ಬರುತ್ತಿರುವ ಪಾದಯಾತ್ರಿಗಳಿಗೆ ನಿತ್ಯನೂತನ ಭಜನಾ ಮಂದಿರ ಜೋಡುಸ್ಥಾನದ ವತಿಯಿಂದ ನೇತ್ರಾವತಿಯ ಸ್ನಾನಘಟ್ಟದಲ್ಲಿ ಮಜ್ಜಿಗೆ ವಿತರಿಸಲಾಯಿತು. ಫೆ.13,14ರಂದು ಬೆಳಗ್ಗೆ 8 ರಿಂದ ರಾತ್ರಿ 8 ರ ತನಕ ಮಜ್ಜಿಗೆ ವಿತರಿಸಲಾಗಿದೆ.



ಈ ದಿನ ಮಹಾಶಿವರಾತ್ರಿಯ ಪ್ರಯುಕ್ತ ನಿತ್ಯನೂತನ ಭಜನಾ ಮಂದಿರದ ವತಿಯಿಂದ ಮಜ್ಜಿಗೆ ವಿತರಣೆಯಲ್ಲಿ ಪಾಲ್ಗೊಂಡ ಸ್ವಯಂಸೇವಕರು ಈ ಸೇವೆಯಲ್ಲಿ ಸಂಜೀವ ಟೈಲರ್, ಜನಾರ್ದನ ಗಾಣಿಗ, ಸದಾಶಿವ , ಅಭಿಷೇಕ್, ಅರುಣ ಗಾಣಿಗ, ಪ್ರಭಾಕರ ಪೂಜಾರಿ, ಜಗದೀಶ್ ನಾಯ್ಕ, ಶಾಂತ ಶೆಟ್ಟಿ, ಭಾರತಿ ಸಂಜೀವ ಪೂಜಾರಿ, ಯಶವಂತ ಶೆಟ್ಟಿ, ಸುನೀತಾ, ಶಶಿಕಲಾ ನಾಯ್ಕ, ಸರಸ್ವತಿ ನೇತ್ರಾವತಿ,ಸುಜಾತಾ ನಾಯ್ಕ್,ರೇವತಿ,ಮಂಜುಳಾ. ಎ, ವಿಜಯ ಎಸ್, ಮಾಲತಿ,ಜಗದೀಶ್ ನಾಯ್ಕ, ಚಂದ್ರಹಾಸ, ಜಗದೀಶ್ ಜೈನ್, ಧನಲಕ್ಷ್ಮೀ ಜನಾರ್ದನ್ ಮುಂತಾದವರು ಭಾಗಿಯಾದರು.









