ಬೆಳಾಲು ಗ್ರಾಮ ಪಂಚಾಯತ್ ವತಿಯಿಂದ ಕಲೋನಿಗಳಿಗೆ ಕಸದ ಬುಟ್ಟಿ ವಿತರಣೆ

0

ಬೆಳಾಲು : ಬೆಳಾಲು ಗ್ರಾಮ ಪಂಚಾಯತಿನ ಘನತ್ಯಾಜ್ಯ ಘಟಕಕ್ಕೆ ಕಸ ಸಂಗ್ರಹಿಸಲು ಬೆಳಾಲು ಗ್ರಾಮಪಂಚಾಯತ್ ವ್ಯಾಪ್ತಿಯ ಕಾಲೋನಿಗಳಾದ ಆದರ್ಶ ನಗರ, ಶಾಂತಿನಗರ, ಗಾಂಧಿನಗರ ಮಾಯ, ಇಲ್ಲಿಯ ಮನೆಗಳಿಗೆ ಕಸದ ಬುಟ್ಟಿಯನ್ನು ಗ್ರಾಮ ಪಂಚಾಯತ್ ವತಿಯಿಂದ ವಿತರಿಸಲಾಯಿತು.

ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ್ ಗೌಡ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಗದೀಶ್ ,ಪಂಚಾಯತ್ ಸಿಬ್ಬಂದಿ ವರ್ಗ, ಸಂಜೀವಿನಿ ಒಕ್ಕೂಟದ ಎಂ. ಬಿ. ಕೆ. ಹರಿಣಾಕ್ಷಿ, ಘನ ತ್ಯಾಜ್ಯ ವಾಹನದ ಚಾಲಕಿ ಮಾಯಾ, ಸಹಾಯಕಿ ಸುಂದರಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here