ಫೆ.15: ಗುರುವಾಯನಕೆರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

0

ಗುರುವಾಯನಕೆರೆ: ಫಾದರ್ ಎಲ್. ಎಮ್ ಪಿಂಟೋ ಆಸ್ಪತ್ರೆ ಬದ್ಯಾರ್ , ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಶಾಲಾ ಅಭಿವೃದ್ಧಿ ಸಮಿತಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಗುರುವಾಯನಕೆರೆ ಮತ್ತು ಗ್ರಾಮ ಪಂಚಾಯತ್ ಕುವೆಟ್ಟು ಇದರ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ಉಚಿತ ಕಣ್ಣಿನ ತಪಾಸಣೆ ಮತ್ತು ರಿಯಾಯಿತಿ ದರದಲ್ಲಿ ಕನ್ನಡಕ ವಿತರಣೆ ಹಾಗೂ ಉಚಿತ ಮಹಿಳೆಯರ ಕ್ಯಾನ್ಸರ್ ತಪಾಸಣಾ ಶಿಬಿರ ಫೆ.15 ರಂದು ದ. ಕ. ಜಿ. ಪಂ ಹಿರಿಯ ಪ್ರಾಥಮಿಕ ಶಾಲೆ ಗುರುವಾಯನಕೆರೆಯಲ್ಲಿ ನಡೆಯಲಿದೆ.

ತಪಾಸಣಾ ಶಿಬಿರಲ್ಲಿ ಮೆಡಿಸಿನ್ ವಿಭಾಗ, ಮೂಳೆ ರೋಗ ತಜ್ಞರ ವಿಭಾಗ, ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರ ವಿಭಾಗ, ಚರ್ಮ ರೋಗ ವಿಭಾಗ, ಶಸ್ತ್ರ ಚಿಕಿತ್ಸಾ ವಿಭಾಗ ಈ ಎಲ್ಲಾ ಸೇವೆಗಳು ತಪಾಸಣಾ ಶಿಬಿರದಲ್ಲಿ ಲಭ್ಯವಿರುತ್ತದೆ. 50% ರಿಯಾಯಿತಿ ದರದಲ್ಲಿ ರಕ್ತ ಪರೀಕ್ಷೆ, ಉಚಿತ ಹೆಲ್ತ್ ಕಾರ್ಡ್ ಸಿಗುತ್ತದೆ.ಈ ಎಲ್ಲಾ ಸೇವೆಗಳನ್ನು ಸದುಪಯೋಗ ಪಡೆದುಕೊಂಡು, ಹೆಚ್ಚಿನ ಮಾಹಿತಿಗಾಗಿ 8762692625, 7022313777 ಕರೆ ಮಾಡಬಹುದು

LEAVE A REPLY

Please enter your comment!
Please enter your name here