ಫೆ. 12ರಿಂದ 16: ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ, ಆರಾಟ್ ಉತ್ಸವ

0

ಚಾರ್ಮಾಡಿ: ಮತ್ತೂರು ಶ್ರೀ ಪಂಚಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆ ಮತ್ತು ಆರಾಟ್ ಉತ್ಸವ ಬ್ರಹ್ಮ ಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ಹಿರಿತನದಲ್ಲಿ ಫೆ. 12ರಿಂದ 16ರ ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಕಾರ್ಯಕ್ರಮಗಳು.ಫೆ 12ರಂದು ಬೆಳಿಗ್ಗೆ ಪ್ರಾರ್ಥನೆ ಪಂಚಗವ್ಯ ಪುಣ್ಯಾಹ, ಗಣಹೋಮ, ಸಾನಿಧ್ಯ ಕಲಶ ಪೂಜೆ,ಸಾನಿಧ್ಯ ಕಲಶಾಭಿಷೇಕಬೆಳಿಗ್ಗೆ ಗಂಟೆ 11:30ಕ್ಕೆ ಕೊಡಿ ಏರುವುದು.ಮಧ್ಯಾಹ್ನ ಮಹಾಪೂಜೆ ಉತ್ಸವಬಲಿ,ಸಂಜೆ 6-00ಕ್ಕೆ ದೀಪರಾಧನೆ7-00ರಿಂದ ಊರ ಶಾಲಾ ಮಕ್ಕಳಿಂದ ಸಾಂಸ್ಕೃಕ ಕಾರ್ಯಕ್ರಮಗಳು 8-00ಕ್ಕೆ ದೊಡ್ಡ ರಂಗ ಪೂಜೆ.ಫೆ.13ರಂದು ಬೆಳಿಗ್ಗೆ ಗಣಹೋಮ ಉಷ ಪೂಜೆ, ಬಿಂಬ ಶುದ್ದಿ, ಕಲಶ ಪೂಜೆ, ಸಾನಿಧ್ಯ ಕಲಶಾಭಿಷೇಕ, ಮಹಾ ಪೂಜೆ, ತತ್ವ ಬಲಿ, ಉತ್ಸವ ಬಲಿಸಂಜೆ 6-00ಕ್ಕೆ ದೀಪರಾಧನೆರಾತ್ರಿ 8-00ಕ್ಕೆ ರಂಗ ಪೂಜೆ, ಉತ್ಸವ ಬಲಿ, ನೃತ್ಯ ಬಲಿ8-30ಕ್ಕೆ ಶಾರದಾ ಆರ್ಟ್ಸ್ ಐಸಿರಿ ಕಲಾವಿದರು ಮಂಜೇಶ್ವರ ಇವರಿಂದ ಪೌರಾಣಿಕ ನಾಟಕ. “ಭಜರಂಗಿ ಬಲಿ ” ಪ್ರದರ್ಶನ ಗೊಳ್ಳಲಿದೆ. ಫೆ.14ರಂದು ಬೆಳಿಗ್ಗೆ ಗಣಹೋಮ, ಉಷಪೂಜೆ, ಪ್ರಾತ ಬಲಿ, ಸಾನಿಧ್ಯ ನವಕ ಕಲಶಾಭಿಷೇಕ, ಉತ್ಸವ ಬಲಿಸಂಜೆ 6-00ಕ್ಕೆ ದೀಪರಾಧನೆರಾತ್ರಿ 8-00ಕ್ಕೆ ದೊಡ್ಡ ರಂಗ ಪೂಜೆ 8-30ಕ್ಕೆ ಧಾರ್ಮಿಕ ಸಭೆ, ಪಂಚಶ್ರೀ ಸಾಂಸ್ಕೃತಿಕ ಕಲಾ ಕೇಂದ್ರದ ವಿದ್ಯಾರ್ಥಿಗಳಳಿಂದ ಯಕ್ಷಗಾನ “ಪಾಂಚಜನ್ಯ”, (ಗುರು ದಕ್ಷನೆ )ಫೆ.15ರಂದು ಬೆಳಿಗ್ಗೆ ಗಣಹೋಮ, ವೈದಿಕ ವಿಧಿವಿಧಾನ10-20ಕ್ಕೆ ತುಲಾಭಾರ ಸೇವೆಸಂಜೆ 6.00ಕ್ಕೆ ದೀಪರಾಧನೆ,, ಮತ್ತೂರು ಬೆಡಿ ಸೇವೆ, 6-30ಕ್ಕೆ ರಾತ್ರಿ ದೊಡ್ಡ ರಂಗಪೂಜೆ, ರಥಬೀದಿ ಯಿಂದ ದೇವರ ಕಟ್ಟೆಗೆ ದೇವರ ಸವಾರಿ ಕಟ್ಟೆ ಪೂಜೆ ಸಿಡಿ ಮದ್ದು ಪ್ರದರ್ಶನ, ನೃತ್ಯ ಬಲಿ, ಬಟ್ಟಲು ಕಾಣಿಕೆ,, ಕವಾಟ ಬಂಧನ.ಫೆ. 16ರಂದು ಬೆಳಿಗ್ಗೆ ಕಾವಾಟೋದ್ಘಾಟನೆ, ಆರಟು ಬಲಿ, ಅರಾಟು ಉತ್ಸವ, ದೇವರ ಜಳಕ, ಕಟ್ಟೆ ಪೂಜೆ, ಬಟ್ಟಲು ಕಾಣಿಕೆ, ಕೋಡಿ ಇಳಿಸುವುದು, ಸಂಪ್ರೊಕ್ಷಣೆಸಂಜೆ ದೈವಗಳ ಭಂಡಾರ ಹೊರಡುವುದು ಬಳಿಕ ಪಿಲಿಚಾಮುಂಡಿ ಮತ್ತು ಅಂಗಣ ಪಂಜುರ್ಲಿ ದೈವಗಳಿಗೆ ನೇಮೋತ್ಸವ, ರಾತ್ರಿ ರಂಗಪೂಜೆ ನಡೆಯಲಿದೆ ಎಂದು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಯಶೋಧರ ವಳಸರಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here