






ಬೆಳ್ತಂಗಡಿ: ತಾಲೂಕಿನ ಸುಧೆಮೊಗರು ಎಂಬಲ್ಲಿ ಫೆ.09 ರಂದು ಜನತೆ ಬೆಚ್ಚಿಬೀಳುವ ಘಟನೆಯೊಂದು ನಡೆದ ಹಿನ್ನಲೆ ತಾಲೂಕು ಆಸ್ಪತ್ರೆಗೆ ಶಾಸಕ ಹರೀಶ್ ಪೂಂಜ ಭೇಟಿ ನೀಡಿದ್ದಾರೆ.ಪೋಷಕರ ಜೊತೆ ಮಾತುಕತೆ ನಡೆಸಿ ಘಟನೆಯ ವಿವರ ಪಡೆದಿದ್ದಾರೆ.


ಹಾಡುಹಗಲೇ ಇಂತಹ ಘಟನೆ ನಡೆದಿರುವುದು ನಿಜಕ್ಕೂ ಭಯ ಹುಟ್ಟಿಸುವಂತಹ ವಿಚಾರ. ಇದು ಗೃಹ ಇಲಾಖೆಯ ವೈಫಲ್ಯ. ಸೂಕ್ತ ರೀತಿಯಲ್ಲಿ ಬಂದೋಬಸ್ತ್ ಇಲ್ಲದೆ ಇರುವ ಕಾರಣ ಇಂತಹ ಘಟನೆಗಳು ನಡೆಯುತ್ತಿದೆ. ಈ ಬಗ್ಗೆ ಈಗಾಗಲೇ ಜಿಲ್ಲಾ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ. ತಕ್ಷಣ ಈ ಗಂಭೀರ ಪ್ರಕರಣವನ್ನು ತನಿಖೆಗೆ ಒಳಪಡಿಸಿ ದುಷ್ಕರ್ಮಿಗಳಿಗೆ ಶಿಕ್ಷೆ ವಿಧಿಸಬೇಕು ಎಂದು ಶಾಸಕ ಹರೀಶ್ ಪೂಂಜರು ಆಗ್ರಹಿಸಿದ್ದಾರೆ.









