ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದಲ್ಲಿ ಭಜಕರ ಶ್ರಮದಾನ

0

ಬಳ್ಳಮಂಜ: ಮಹತೋಭಾರ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನ ಬಳ್ಳಮಂಜದಲ್ಲಿ ಭಜಕರ ಶ್ರಮದಾನ ದೇವಾಲಯದ ಹಿರಿಮೆ. ಶ್ರೀ ದೇವಾಲಯದ ಈಶ್ವರ ಗರ್ಭಗುಡಿ ಹಾಗೂ ತೀರ್ಥ ಮಂಟಪದ ನವೀಕರಣದ ಪ್ರಯುಕ್ತ ಹಳೆ ಗರ್ಭ ಗುಡಿಯ ನೆಲಸಮ ಮಾಡುವ ಕಾಯಕ ಪಂಚಾಂಗ ನಿರ್ಮಾಣ ಅಂಗಣವನ್ನು ಅಗೆದು ಕಾಂಕ್ರೀಟ್ ಹಾಕಿ ಹಲವು ಕೆಲಸಗಳನ್ನು ಗ್ರಾಮದ ಸುಮಾರು 200 ಹಿಂದೂ ಭಾಂದವರು ಒಟ್ಟು ಸೇರಿ ಶ್ರಮದಾನದ ಮೂಲಕ ನೆರವೇರಿಸಿದರು.

ಶ್ರಮದಾನದಿಂದ ದೇವಾಲಯಕ್ಕೆ ಅಂದಾಜು ಸುಮಾರು 4 ಲಕ್ಷಗಳಷ್ಟು ಉಳಿತಾಯವಾಗಿರುತ್ತದೆ ಎಂದು ಅನುವಂಶಿಯ ಆಡಳಿತ ಮೊಕ್ತೇಸರರು ತಿಳಿಸಿದ್ದು ಈ ರೀತಿಯ ಸಹಕಾರ ಊರಿನ ಭಕ್ತಾದಿಗಳಿಂದ ದೊರಕಿದರೆ ದೇವಾಲಯಗಳ ಅಭಿವೃದ್ಧಿಗೆ ಮುನ್ನುಗಲು ಆಡಳಿತದವರಿಗೆ ಧೈರ್ಯ ಉಂಟಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸೇರಿದ ಎಲ್ಲಾ ಕರಸೇವಕರನ್ನು ಅಭಿನಂದಿಸಿ ಮುಂದಿನ ದಿನಗಳಲ್ಲಿ ಸ್ವಚ್ಛತೆ, ಚಪ್ಪರ ಹಾಕುವುದು ಇತ್ಯಾದಿ ಬ್ರಹ್ಮ ಕಲಶದ ಪೂರ್ವ ಭಾವಿ ಕೆಲಸಗಳು ಹಾಗೂ ಮಾ. 1ರಂದು ನಡೆಯುವ ಬ್ರಹ್ಮ ರಥದ ಮೆರವಣಿಗೆ ಮತ್ತು ಮಾ. 29 ಶನಿವಾರದಿಂದ ರಿಂದ ಏ.6ರ ಸೋಮವಾರದವರೆಗೆ ನಡೆಯುವ ಶ್ರೀ ದೇವರ ಬ್ರಹ್ಮಕಲಶ ಇತ್ಯಾದಿಗಳಿಗೆ ಎಲ್ಲರ ಸಹಕಾರವನ್ನು ಕೋರಿದರು.

LEAVE A REPLY

Please enter your comment!
Please enter your name here