ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ನಂದಗೋಕುಲ’ ನಟಿ ಕೃಷ್ಣಪ್ರಿಯಾ ಭಟ್

0

ನಾರಾವಿ: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ನಂದಗೋಕುಲ’ ಧಾರಾವಾಹಿ ನಟಿ ಕೃಷ್ಣಪ್ರಿಯಾ ಭಟ್‌ ಅವರು ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಂದಗೋಕುಲದಲ್ಲಿ ಮಾಧವ, ಕೇಶವ, ವಲ್ಲಭನ ಮುದ್ದಿನ ತಂಗಿ ರಕ್ಷಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕೃಷ್ಣಪ್ರಿಯಾ, ನಿಜ ಜೀವನದಲ್ಲಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.ಇಂದು (ಫೆ.6) ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಕೃಷ್ಣಪ್ರಿಯಾ ಮತ್ತು ಅಮೋಘ ಅವರ ಮದುವೆ ಸಮಾರಂಭ ಜರುಗಿದೆ. ಫೆಬ್ರುವರಿ 7ರಂದು ಧರ್ಮಸ್ಥಳ ಸಮೀಪವಿರುವ ಕನ್ಯಾಡಿ ಶ್ರೀರಾಮ ಮಂದಿರದಲ್ಲಿ ಆರತಕ್ಷತೆ ನಡೆಯಲಿದೆ. ಮದುವೆಯಲ್ಲಿ ಕಿರುತೆರೆ ಕಲಾವಿದರು ಭಾಗಿಯಾಗಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

LEAVE A REPLY

Please enter your comment!
Please enter your name here