ಬೈಂದೂರು ಉತ್ಸವ-2026ರಲ್ಲಿ ಸೇವಾಭಾರತಿ ತಂಡ

0

ಬೆಳ್ತಂಗಡಿ: ಬೈಂದೂರು ತಾಲೂಕಿನ ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆಯವರ ಪರಿಕಲ್ಪನೆಯಲ್ಲಿ ಆಯೋಜಿಸಲಾದ ಬೈಂದೂರು ಉತ್ಸವ – 2026 ಕಾರ್ಯಕ್ರಮದಲ್ಲಿ ಸೇವಾಭಾರತಿ ತಂಡ ಭಾಗವಹಿಸಿತು. ಉತ್ಸವದ ಅಂಗವಾಗಿ ಸಂಸ್ಥೆಯ ಮಳಿಗೆಯನ್ನು ತೆರೆಯಲಾಗಿದ್ದು, ಸಂಸ್ಥೆಯ ಕರಪತ್ರ, ವಾರ್ಷಿಕ ವರದಿ ಹಂಚಿ, ಸಂಸ್ಥೆಯ ವಿವಿಧ ಯೋಜನೆಗಳ ಸೇವಾ ಕಾರ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಯಿತು.

ಬೈಂದೂರು ಉತ್ಸವದಲ್ಲಿ ಸಂಸ್ಥೆಯ ಖಜಾಂಚಿ ಹಾಗೂ ಸೇವಾಧಾಮದ ಸಂಸ್ಥಾಪಕ ಕೆ. ವಿನಾಯಕ ರಾವ್ ಅವರನ್ನು ಗೌರವಿಸಲಾಯಿತು. ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆಯವರಿಗೆ ಹಾಗೂ ಬೈಂದೂರು ಉತ್ಸವದ ಪದಾಧಿಕಾರಿಗಳಿಗೆ ಸೇವಾಭಾರತಿ ಸಂಸ್ಥೆಯ ಪರವಾಗಿ ಧನ್ಯವಾದಗಳನ್ನು ಸಲ್ಲಿಸಲಾಯಿತು. ಸಂಸ್ಥೆಯ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here