ಜ. 31ರಿಂದ ಫೆ.6: ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆ, ರಥೋತ್ಸವ

0

ಕಲ್ಮಂಜ: ಸಂಗಮ ಕ್ಷೇತ್ರ ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ಜ. 31ರಿಂದ ಫೆ. 6ರ ತನಕ ಶ್ರೀ ಸದಾಶಿವ ದೇವರ ಹಾಗೂ ಪರಿವಾರ ದೇವರುಗಳ ಧ್ವಜ ಪ್ರತಿಷ್ಠಾ ಮಹೋತ್ಸವ, ಪ್ರತಿಷ್ಠಾ ದಿನಾಚರಣೆ ವಾರ್ಷಿಕ ಜಾತ್ರೆ, ರಥೋತ್ಸವ ವೇ. ಮೂ. ನೀಲೇಶ್ವರ ಪದ್ಮನಾಭಾಟ ತಂತ್ರಿಗಳ ನೇತೃತ್ವದಲ್ಲಿ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ಕಾರ್ಯಕ್ರಮಗಳು:ಜ. 31ರಂದು ಬೆಳಿಗ್ಗೆ ಗಂಟೆ 7-00ಕ್ಕೆ : ಗಣಹೋಮ, ತೋರಣ ಮುಹೂರ್ತಪೂರ್ವಾಹ್ನ ಗಂಟೆ 10-00ಕ್ಕೆ : ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತಪೂರ್ವಾಹ್ನ ಗಂಟೆ 11-00ಕ್ಕೆ : ಶತರುದ್ರಾಭಿಷೇಕಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆಸಾಯಂಕಾಲ 5-00 ಗಂಟೆಗೆ : ತಂತ್ರಿಗಳ ಆಗಮನ, ಸ್ವಾಗತ, ಸಮೂಹ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹ ಅಂಕುರಾರೋಹಣ, ಪ್ರಾಸಾದ ಶುದ್ದಿ, ರಕ್ಷೆಘ್ನ ಹೋಮ, ವಾಸ್ತುಹೋಮ, ವಾಸ್ತುಕಲಶ ಪೂಜೆ, ವಾಸ್ತುಬಲಿ, ವಾಸ್ತು ಕಲಶಾಭಿಷೇಕ, ರಾತ್ರಿ ಪೂಜೆ, ಅನ್ನಸಂತರ್ಪಣೆ.ಫೆ.1ರಂದು ಬೆಳಿಗ್ಗೆ 6-00 ರಿಂದ ಮತ್ತು ಸಂಜೆ 6-00ರಿಂದ ವೈದಿಕ ಕಾರ್ಯಕ್ರಮಗಳು. ಫೆ. 2ರಂದುಬೆಳಿಗ್ಗೆ ಗಂಟೆ 6-00ರಿಂದಮತ್ತು ಸಂಜೆ 6-00ರಿಂದ ವೈದಿಕ ಕಾರ್ಯಕ್ರಮಗಳುಫೆ. 3 ಬೆಳಿಗ್ಗೆ 6-00ರಿಂದ ವೈದಿಕ ಕಾರ್ಯಕ್ರಮಗಳುಸಂಜೆ ಗಂಟೆ 6-00ರಿಂದ ಸ್ಥಳೀಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ರಾತ್ರಿ 7-30 ರಿಂದ ಧಾರ್ಮಿಕ ಸಭೆರಾತ್ರಿ 9-00ರಿಂದ ರಂಗ ಕಲಾವಿದರು ಅಲೆತ್ತೂರು ಬಂಟ್ವಾಳ ಇವರು ಅಭಿನಯಿಸುವ ಸಾಮಾಜಿಕ ಹಾಸ್ಯಮಯ ತುಳು ನಾಟಕ”ನಮ್ಮನೇ ಇಲ್ಲ್.”…ಫೆ.4ರಂದುಬೆಳಿಗ್ಗೆ 6-00ರಿಂದ ವೈದಿಕ ಕಾರ್ಯಕ್ರಮಗಳುಸಂಜೆ 6-00ರಿಂದ ಸ್ಥಳೀಯ ಶಾಲಾ ವಿದ್ಯಾರ್ಥಿಗಳಿಂದ ಹಾಗೂ ಊರವರಿಂದ ಸಾಂಸ್ಕೃಕ ವೈವಿಧ್ಯ.ಫೆ. 5ರಂದು ಬೆಳಿಗ್ಗೆ 6-00 ಗಂಟೆಗೆ : ಮಹಾಗಣಪತಿ ಹೋಮಬೆಳಿಗ್ಗೆ 8-24 ರಿಂದ 9-06 ರವರೆಗೆ : ಕುಂಭ ಲಗ್ನ ಶುಭ ಮುಹೂರ್ತದಲ್ಲಿ ವಾಹನ ಪತ್ರಿಷ್ಠೆ, ವಾಹನ ಕಲಶಾಭಿಷೇಕ, ಧ್ವಜ ಪ್ರತಿಷ್ಠೆ, ಕುಂಭೇಶ ಕಲಶಾಭಿಷೇಕ, ನಿದ್ರಾಕಲಶಾಭಿಷೇಕ, ಕೊಡಿ ಮರದಲ್ಲಿ ಮಹಾಪೂಜೆ, ಸದಾಶಿವ ದೇವರಿಗೆ ಪರಿಕಲಶಾಭಿಷೇಕ, ಕುಂಭೇಶ ಕಲಶಾಭಿಷೇಕ, ಬ್ರಹ್ಮ ಕಲಶಾಭಿಷೇಕ, ಪರಿವಾರ ದೇವರಿಗೆ ಕಲಶಾಭಿಷೇಕ, ಪೂಜೆಮಧ್ಯಾಹ್ನ ಮಹಾಪೂಜೆ ಅನ್ನ ಸಂತರ್ಪಣೆಸಾಯಂಕಾಲ 6-00 ಗಂಟೆಗೆ : ರಂಗಪೂಜೆ, ಶ್ರೀ ಭೂತಬಲಿ ಉತ್ಸವ, ಬಲಿ ಉತ್ಸವ, ಪಾಲಕ್ಕಿ ಬಲಿ ಉತ್ಸವ ಪುಷ್ಪ ರಥೋತ್ಸವ, ಅಶ್ವತ್ಥಕಟ್ಟೆ ಪೂಜೆ, ವಸಂತಕಟ್ಟೆ ಪೂಜೆ.ರಾತ್ರಿ 8.30ರಿಂದ ಮಂದಾರ ಕಲಾವಿದರು ಉಜಿರೆ ಅಭಿನಯಿಸುವ ಭಕ್ತಿ ಪ್ರಧಾನ ತುಳು ಹಾಸ್ಯಮಯ ನಾಟಕ” ಮಾಯೋದ ತುಡರ್ ಪ್ರದರ್ಶನ ಗೊಳ್ಳಲಿದೆ.ಫೆ. 6 ಬೆಳಿಗ್ಗೆ 6-00 ಗಂಟೆಗೆ ಗಣಹೋಮ, ದರ್ಶನಬಲಿ ಉತ್ಸವ, ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಹಾಪೂಜೆ, ಪ್ರಸಾದ ವಿತರಣೆಬೆಳಿಗ್ಗೆ 10-30 ಗಂಟೆಗೆ : ಆಶ್ಲೇಷಾ ಬಲಿ, ಅನ್ನಸಂತರ್ಪಣೆಸಾಯಂಕಾಲ 6-00 ಗಂಟೆಗೆ : ಭಂಡಾರ ಹೊರಡುವುದು,ಸಂಜೆ 6.30ರಿಂದ ಶ್ರೀ ಸತ್ಯ ನಾರಾಯಣ ಮಕ್ಕಳ ಯಕ್ಷಗಾನ ತರಬೇತಿ ಕೇಂದ್ರ ನಿಡಿಗಲ್ ಇವರಿಂದ ಯಕ್ಷಗಾನ “ಶಾಂಭವಿ ವಿಲಾಸ”ರಾತ್ರಿ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದು ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸುನಿಲ್ ಕನ್ಯಾಡಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಗೌಡ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here