






ಪಿಲ್ಯ:ಗುಡ್ ಫ್ಯೂಚರ್ ಶಾಲೆಯಲ್ಲಿ ಜ.26 ರಂದು ಗಣರಾಜ್ಯೋತ್ಸವ ಆಚರಣೆಯನ್ನು ಮಾಡಲಾಯಿತು . ಸಂಚಾಲಕ ನಸೀರ್ ಅಹಮ್ಮದ್ ಖಾನ್ ಅವರು ಧ್ವಜಾರೋಹಣ ನೆರವೇರಿಸಿ ಗಣರಾಜ್ಯೋತ್ಸವದ ಮಹತ್ವವನ್ನು ತಿಳಿಸಿ ಶುಭ ಸಂದೇಶವನ್ನು ನೀಡಿದರು.



ಮುಖ್ಯ ಶಿಕ್ಷಕ ಪ್ರಭಾಕರ ಶೆಟ್ಟಿ ಅವರು ಸಂವಿಧಾನದ ಮಹತ್ವವನ್ನು ತಿಳಿಸುತ್ತಾ ಕಾರ್ಯಕ್ರಮಕ್ಕೆ ಶುಭ ಕೋರಿದರು. ಸಮಾರಂಭದಲ್ಲಿ ಪಾಲಕ ಪೋಷಕ ಮಂಡಳಿಯ ಉಪಾಧ್ಯಕ್ಷ ಧನಕೀರ್ತಿ ಜೈನ್ ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಮಕ್ಕಳಿಂದ ದೇಶ ಭಕ್ತಿ ಗೀತೆ ಹಾಡಿಸಿ ಭಾಷಣವನ್ನು ಮಾಡಿಸಲಾಯಿತು. ಶಿಕ್ಷಕಿ ಅಫ್ರಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಿಕ್ಷಕಿ ಶ್ರುತಿ ಅವರು ಸ್ವಾಗತಿಸಿ ವಂದಿಸಿದರು.









