






ಕನ್ಯಾಡಿ-1 ಗ್ರಾಮದ ಕನ್ಯಾಡಿ ಪಡ್ಪು-ಕನ್ಯಾಡಿ-ಭೀಮಂಡೆ ಬೊಳಿಯೆಂಜ ರಸ್ತೆಯ ಉದ್ಘಾಟನೆಯನ್ನು ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ ನೆರವೇರಿಸಿದರು. ಸುಮಾರು 3 ಕೋಟಿ ರೂ ವೆಚ್ಚದಲ್ಲಿ ಈ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಯಿತು.



ಈ ಸಂದರ್ಭದಲ್ಲಿ ಮೆಸ್ಕಾಂ ಅಧ್ಯಕ್ಷರಾದ ಹರೀಶ್ ಕುಮಾರ್, ರಕ್ಷಿತ್ ಶಿವರಾಂ, ವಿಕಾಸ್ ಹೆಗ್ಡೆ ಮೂಡಬೆಟ್ಟು, ಶಶಿಕಿರಣ್ ಜೈನ್, ಮುನಿರಾಜ್ ಅಜ್ರಿ, ಪ್ರವೀಣ್ ವಿ.ಜಿ, ಶಶಿಕಲಾ ಜೈನ್, ನಡ ಕನ್ಯಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ವಿಕಾಸ್ ಹೆಗ್ಡೆ ಸಚಿವರನ್ನು ಸನ್ಮಾನಿಸಿದರು.









