






ಸುಲ್ಕೇರಿಮೊಗ್ರು: ಪಲ್ಕೆ ಶ್ರೀ ಮಹಾಮಾಯಿ ದೇವರ 12ನೇ ಪ್ರತಿಷ್ಠಾವರ್ಧಂತಿಯ ಅಂಗವಾಗಿ ದೇವರಿಗೆ ಪುಣ್ಯಹವಾಚನೆ ಸಪ್ತ ಶುದ್ದಿ ವಾಸ್ತು ಪೂಜೆ, ವಾಸ್ತು ರಾಕ್ಷೋಘ್ನ ಹೋಮ, ದುರ್ಗಾಪೂಜೆ, ಕಳಶಾರಧನೆ ಅಧಿವಾಸ ಹೋಮ, ಸಾನಿಧ್ಯ ಕಳಶಾಭಿಷೇಕ, ದುರ್ಗಾ ಹೋಮ, ಕಳಶಾಭಿಷೇಕ ಪ್ರಸನ್ನ ಪೂಜೆ, ಪ್ರಸನ್ನ ಪೂಜಾದಿ ಸತ್ಕರ್ಮಗಳು ಕೇಮೊಟ್ಟು ಗುತ್ತು ಪ್ರಭಾಕರ ಮಂಜಿತ್ತಾಯರ ನೇತೃತ್ವದಲ್ಲಿ ಜ.25ರಂದು ಸುಲ್ಕೇರಿಮೊಗ್ರು ಗ್ರಾಮದ ಪಲ್ಕೆಯಲ್ಲಿ ವಿಜ್ರಂಭಣೆಯಿಂದ ಜರಗಿತು.



ಸುಲ್ಕೇರಿಮೊಗ್ರು ಶ್ರೀ ಮಹಿಷಮರ್ದಿನಿ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮವು ನೆರವೇರಿತು. ಹಾಗೂ ಅನ್ನದಾನ ಹಾಗೂ ಉಪಹಾರದ ಸೇವಾಕರ್ತರಾದ ಶಶಿಕಲಾ ಮತ್ತು ಗುರುವಪ್ಪ ಪೂಜಾರಿ ಮತ್ತು ಮಕ್ಕಳು, ಪಟ್ಲ ಮತ್ತು ಕಸ್ತೂರಿ ಮತ್ತು ರಾಮಪ್ಪ ಪೂಜಾರಿ ಮತ್ತು ಮಕ್ಕಳು ಸಣ್ಣಪಟ್ಲ ಹಾಗೂ ಸೇಸಮ್ಮ ಮತ್ತು ಮಕ್ಕಳು ಇಂದ್ರಪ್ರಸ್ಥ ಹಾಗೂ ಶ್ರಮಿಕರನ್ನು ಗೌರವಿಸಲಾಯಿತು. ದೇವರ ಸನ್ನಿದಾನಕ್ಕೆ ವಿಪತ್ತು ನಿರ್ವಹಣಾ ಘಟಕದವರು ಸುಂದರವಾದ ಮರದ ಟೀಪಾಯಿಯನ್ನು ಕೊಡುಗೆಯಾಗಿ ನೀಡಿದರು.









