ಬದನಾಜೆ ಪ್ರೌಢಶಾಲೆ ಇಕೋ ಕ್ಲಬ್ ವತಿಯಿಂದ ಉಪನ್ಯಾಸ ಮಾಲಿಕೆ ಮತ್ತು ಕ್ಷೇತ್ರ ಭೇಟಿ

0

ಸರಕಾರಿ ಪ್ರೌಢಶಾಲೆ ಬದನಾಜೆಯಲ್ಲಿನ ಸಲೀಂ ಅಲಿ ಇಕೋ ಕ್ಲಬ್ ವತಿಯಿಂದ ಪ್ಲಾಸ್ಟಿಕ್ ಬಳಕೆಯ ಪರಿಣಾಮಗಳು ಮತ್ತು ಜೀವವೈವಿಧ್ಯತೆಯ ಮಹತ್ವದ ಕುರಿತು ಉಪನ್ಯಾಸಮಾಲಿಕೆ ಕಾರ್ಯಕ್ರಮ ನಡೆಯಿತು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸರಕಾರಿ ಪದವಿ ಪೂರ್ವ ಕಾಲೇಜು ಕನ್ಯಾನದ ಶಿಕ್ಷಕಿಯಾದ ಶ್ರೀಮತಿ ಶೋಭಾ ಶೆಟ್ಟಿಯವರು ಉಪನ್ಯಾಸವನ್ನು ನೀಡುತ್ತಾ. ಪ್ಲಾಸ್ಟಿಕ್ ಅನ್ನು ಬಂಧಿಸಿ ಪರಿಸರವನ್ನು ಉಳಿಸಲು ಸ್ಪಂದಿಸಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಪ್ಲಾಸ್ಟಿಕ್ ಬಳಕೆಯಿಂದ ಆಗುವ ಪರಿಸರ ಮಾಲಿನ್ಯ, ಜೀವಿಗಳ ಮೇಲೆ ಉಂಟಾಗುವ ಪರಿಣಾಮಗಳು, ಪ್ಲಾಸ್ಟಿಕ್ ಬಳಕೆಯ ನಿಯಂತ್ರಣಕ್ಕೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ವಿಶೇಷ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಶ್ರೀಮತಿ ಜಮುನಾ ವಹಿಸಿದ್ದರು. ಕಾರ್ಯಕ್ರಮದ ಸಂಯೋಜನೆ ಮತ್ತು ನಿರೂಪಣೆಯನ್ನು ವಿಜ್ಞಾನ ಶಿಕ್ಷಕರಾದ ರಾಮಕೃಷ್ಣ ಎಸ್ ಕೆ ಮಾಡಿದರೆ ದೈಹಿಕ ಶಿಕ್ಷಕರಾದ ಶ್ರೀ ವಿಠಲ್ ನಾಯಕ್ ಸ್ವಾಗತಿಸಿದರು.

ಇಕೋ ಕ್ಲಬ್ ಸದಸ್ಯ ವಿದ್ಯಾರ್ಥಿಗಳು ಉಜಿರೆಯ ರತ್ನಮಾನಸ ಮತ್ತು ಬರಂಗಾಯದ ಅಗ್ರಿ ಲೀವ್ ಸಂಸ್ಥೆಗಳಿಗೆ ಭೇಟಿ ನೀಡಿದರು. ರತ್ನಮಾನಸದ ನಿರ್ವಾಹಕರಾದ ಶ್ರೀ ಯತೀಶ್ ವಿದ್ಯಾರ್ಥಿಗಳಿಗೆ ಹಲವಾರು ಗಿಡಗಳ ಪರಿಚಯವನ್ನು ಮಾಡಿಸಿ, ಸಾವಯವ ಗೊಬ್ಬರದ ತಯಾರಿಕೆ ಮತ್ತು ಬಳಕೆ, ಕೃಷಿ ಪದ್ಧತಿಗಳಲ್ಲಿ ಆಧುನಿಕ ಕ್ರಮಗಳು, ಸಾಂಪ್ರದಾಯಿಕ ಪ್ರಾಚೀನ ಪದ್ಧತಿಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು ಆಗ್ರಿಲೀಫ್ ಸಂಸ್ಥೆಯಲ್ಲಿ ತ್ಯಾಜ್ಯಗಳಿಂದ ಉಪಯುಕ್ತ ವಸ್ತುಗಳ ತಯಾರಿಕೆಯ ಕುರಿತು ಮಾಹಿತಿಯನ್ನು ಪಡೆಯಲಾಯಿತು. ಈ ಸಂದರ್ಭದಲ್ಲಿ ದೈಹಿಕ ಶಿಕ್ಷಕರಾದ ಶ್ರೀ ವಿಠಲ್ ನಾಯ್ಕ, ಹಿಂದಿ ಶಿಕ್ಷಕಿಯಾದ ಶ್ರೀಮತಿ ಹೇಮಾವತಿ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here