ಉಜಿರೆ ರೈತ ಉತ್ಪಾದಕರ ಕಂಪೆನಿಗೆ ಉಡುಪಿ ಹೋಬಳಿ ರೈತರ ಭೇಟಿ

0

ಉಜಿರೆ: ಜಿಲ್ಲೆಯಾದ್ಯಂತ ರೈತರನ್ನು ಆಕರ್ಷಿಸುತ್ತಿರುವ ಉಜಿರೆ ರೈತ ಉತ್ಪಾದಕರ ಕಂಪನಿಗೆ ಉಡುಪಿ ಜಿಲ್ಲೆಯ ಉಡುಪಿ ಹೋಬಳಿಯ ಕೋಟಾ, ಬ್ರಹ್ಮಾವರ, ಕಾಪು ರೈತರು ಜ., 23 ರಂದು ಉಜಿರೆ ರೈತ ಉತ್ಪಾದಕರ ಕಂಪನಿಗೆ ಭೇಟಿ ನೀಡಿ ಮಾಹಿತಿ ಪಡೆದರು.

ಕಂಪನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ್ ಗೌಡ ಕಲ್ಕುರ್ಣಿ ಕಂಪನಿಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು . ಬೆಳ್ತಂಗಡಿ ತಾಲೂಕಿನ ಸುಮಾರು 1500 ರೈತರು ಸದಸ್ಯರಾಗಿದ್ದು ಹೆಚ್ಚಿನ ರೈತರು ಇದರ ಸದುಪಯೋಗ ಪಡೆದು ಉತ್ತಮ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಜಿಲ್ಲೆಯಾದ್ಯಂತ ರೈತರನ್ನು ಕಂಪನಿಯ ಚಟುವಟಿಕೆ ಆಕರ್ಷಿಸುತ್ತಿರುವ ಕುರಿತು ಸಂತಸ ವ್ಯಕ್ತಪಡಿಸಿದರು . ಕಂಪನಿಯ ಸಿಬ್ಬಂದಿ ಹರ್ಷಿತಾ ಇವರು ಸಹಕರಿಸಿದರು.

LEAVE A REPLY

Please enter your comment!
Please enter your name here