






ಕ್ಯಾಂಪ್ಕೋ ಚಿತ್ತ ಸದಸ್ಯರ ಆರೋಗ್ಯ ದತ್ತ ಎಂಬ ಯೋಜನೆಯಡಿಯಲ್ಲಿ ಕ್ಯಾಂಪ್ಕೊ ವೇಣೂರು ಶಾಖೆಯ ಸದಸ್ಯ ಬೆಳ್ತಂಗಡಿ ತಾಲೂಕಿನ ಮೂಡುಕೊಡಿ ಗ್ರಾಮದ ರಮೇಶ್ ರಾವ್ ಅವರ ಆಂಜಿಯೋಪ್ಲಾಸ್ಟಿ ವೈದ್ಯಕೀಯ ವೆಚ್ಚದ ಪರಿಹಾರವಾಗಿ ಮಂಜೂರಾದ ₹50,000/- ಮೊತ್ತದ ಚೆಕ್‌ನ್ನು ಶಾಖೆಯಲ್ಲಿ ಜ. 21ರಂದು ಕ್ಯಾಂಪ್ಕೊ ಸಂಸ್ಥೆಯ ನಿರ್ದೇಶಕ ದಯಾನಂದ ಹೆಗ್ಡೆಯವರು ಫಲಾನುಭವಿಗೆ ಹಸ್ತಾಂತರಿಸಿದರು.


ಕ್ಯಾಂಪ್ಕೋ ಬೈಕಂಪಾಡಿ ಪ್ರಾಂತ್ಯದ ಪ್ರಾದೇಶಿಕ ವ್ಯವಸ್ಥಾಪಕ ನಿತಿನ್ ಕೊಟ್ಯಾನ್ ಹಾಗೂ ವೇಣೂರು ಶಾಖೆಯ ವ್ಯವಸ್ಥಾಪಕ ಅನಿಶ್ ರಾಜ್ ಎಂ. ಹಾಗೂ ಶಾಖಾ ಸಿಬ್ಬಂದಿಗಳು ಉಪಸ್ಥಿತರಿದ್ದರು.









