ಬ್ಯೂಟೀಷಿಯನ್ ಮತ್ತು ಎಂಬ್ರಾಯಿಡರಿ ತರಬೇತಿ ಸಮಾರೋಪ ಕಾರ್ಯಕ್ರಮ -ಸ್ವ ಉದ್ಯೋಗ ಯಶಸ್ವಿಯಾಗಲು ಇಚ್ಚಾಶಕ್ತಿ ಮತ್ತು ಆತ್ಮವಿಶ್ವಾಸ ಅಗತ್ಯ: ಕೃಷ್ಣ ಟಿ.

0

ಲಾಯಿಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ- ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರ ಬೆಳ್ತಂಗಡಿಯಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಪ್ರತೀ ವರ್ಷ ಸ್ವಉದ್ಯೋಗ ಆಧಾರಿತ ತರಬೇತಿಯನ್ನು ಉಚಿತವಾಗಿ ನೀಡುತ್ತಿದ್ದಾರೆ. ಫಲಾನುಭವಿಗಳು ಇದನ್ನು ತಮ್ಮ ಸ್ವಾವಲಂಬಿ ಬದುಕಿಗೆ ಪ್ರೇರೇಪಿಸಿಕೊಳ್ಳಬೇಕು. ಯಾರಲ್ಲಿ ಛಲ ಇಚ್ಛಾಶಕ್ತಿ ಇರುತ್ತದೆಯೋ ಅವರು ಯಶಸ್ಸು ಗಳಿಸಬಹುದು. ಯಶಸ್ಸಿಗೆ ಕಠಿಣ ಪರಿಶ್ರಮ ಪಡಬೇಕು. ಎಂದು ಸಮಾರೋಪ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಕೃಷ್ಣ ಟಿ. ಅವರು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ತರಬೇತಿ ಕೇಂದ್ರದ ಪ್ರಾಂಶುಪಾಲ ರಮೇಶ್ ಅವರು ಉದ್ಯೋಗದಲ್ಲಿ ಪರಿಪೂರ್ಣತೆ ಹೊಂದಲು ನಿರಂತರ ಅಭ್ಯಾಸ ಮತ್ತು ಕಲಿಕಾ ಮನೋಭಾವ ಇರಬೇಕು. ಹಾಗಿದ್ದಾಗ ಅದರ ಫಲ ಸಿಗಲು ಸಾಧ್ಯ ಎಂದರು. ನಂತರ ಎಲ್ಲಾ ತರಬೇತಿ ಅಭ್ಯರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭಹಾರೈಸಿದರು.

ಒಟ್ಟು 45 ಮಂದಿ ಮಂದಿ ಅಭ್ಯರ್ಥಿಗಳು ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಹರ್ಷಿತಾ ಮೇಕಪ್ ಆರ್ಟಿಸ್ಟ್ ಅವರು ತರಗತಿ ನೀಡಿದ್ದಾರೆ. ಟೈಲರಿಂಗ್ ಶಿಕ್ಷಕಿ ಉಷಾ ಉಪಸ್ಥಿತರಿದ್ದರು. ತರಬೇತಿ ಸಂಯೋಜಕಿ ಜಯಶ್ರೀ ಕಾರ್ಯಕ್ರಮ ನಿರ್ವಹಣೆ ಮಾಡಿ, ಧನ್ಯವಾದ ನೀಡಿದರು.

LEAVE A REPLY

Please enter your comment!
Please enter your name here