ಕರಾಯ ಶಾಲೆಯಲ್ಲಿ ಬೆಳ್ತಂಗಡಿ ಜಮೀಯ್ಯತ್ತುಲ್ ಫಲಾಹ್ ಘಟಕದಿಂದ ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವ ತರಬೇತಿ ಶಿಬಿರ

0

ಕರಾಯ: ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್. ಎಸ್. ಎಲ್. ಸಿ ಪರೀಕ್ಷಾ ಪೂರ್ವ ತರಬೇತಿ ಶಿಬಿರ ಜಮೀಯ್ಯತ್ತುಲ್ ಫಲಾಹ್ ಬೆಳ್ತಂಗಡಿ ಘಟಕದ ವತಿಯಿಂದ ಜ. 20ರಂದು ಘಟಕದ ಅಧ್ಯಕ್ಷ ಖಾಲಿದ್ ಪುಲಾಭೆಯವರ ಅಧ್ಯಕ್ಷತೆಯಲ್ಲಿ ಜರಗಿತು.

ಹಿರಿಯ ಅಧ್ಯಾಪಕ ಶಿವಬಾಲುರವರು ಮಾತನಾಡಿ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಜಮೀಯ್ಯತ್ತುಲ್ ಫಲಾಹ್ ಬೆಳ್ತಂಗಡಿ ಘಟಕದ ವತಿಯಿಂದ ವರ್ಷಂ ಪ್ರತಿ ಎಸ್.ಎಸ್.ಎಲ್.ಸಿ ಪರೀಕ್ಷಾ ಪೂರ್ವ ತರಬೇತಿ ನಡೆಸುತ್ತಿದ್ದಾರೆ. ಇದರ ಸದುಪಯೋಗಪಡಿಸಿಕೊಂಡು ಉತ್ತಮ ಅಂಕ ಪಡೆದು ಒಳ್ಳೆಯ ವಿದ್ಯಾರ್ಥಿಗಳಾಬೇಕು ಎಂದರು.

ಶರೀಫ್ ಮತ್ತು ಜಗನ್ನಾಥ್ ಅವರು ತರಗತಿ ನಡೆಸಿಕೊಟ್ಟರು. ಅಧ್ಯಕ್ಷ ಭಾಷಣ ಮಾಡಿದ ಖಾಲಿದ್ ಪುಲಾಭೆಯವರು ನಮ್ಮ ಸಂಸ್ತೆಯು ಶಿಕ್ಷಣಕ್ಕಾಗಿ ವಿವಿಧ ರೀತಿಯಲ್ಲಿ ಸಹಕಾರ ನೀಡುತ್ತಿದ್ದು ಆಯ್ದ ಬಡ ವಿದ್ಯಾರ್ಥಿಗಳಿಗೆ ವರ್ಷಂ ಪ್ರತಿ ವಿದ್ಯಾರ್ಥಿ ವೇತನ ನೀಡುತ್ತಿದ್ದೇವೆ .ಅದೇ ರೀತಿ ತಾಲೂಕಿನಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ಧನ ನೀಡಿ ಸನ್ಮಾನಿಸಲಾಗುವುದು ಎಂದರು.

ಘಟಕದ ಕೋಶಾಧಿಕಾರಿ ಇಬ್ರಾಹಿಂ ಮುಸ್ಲಿಯಾರ್, ಸದಸ್ಯರಾದ ಇಲ್ಯಾಸ್ ಕರಾಯ ಮಾತನಾಡಿ ಶುಭ ಹಾರೈಸಿದರು. ಉಪಾಧ್ಯಕ್ಷರಾದ ಕಾಸಿಂ ಪದ್ಮುಂಜ ಸದಸ್ಯರಾದ ಕೆ.ಎಸ್. ಅಬ್ದುಲ್ಲಾ ಕರಾಯ ಉಪಸ್ಥಿತರಿದ್ದರು. ಘಟಕದ ಹಿರಿಯ ಸದಸ್ಯ ಉಮರ್ ಕುಂಞ ನಾಡ್ಜೆಯವರು ಸ್ವಾಗತಿಸಿದರು. ದೈಹಿಕ ಶಿಕ್ಷಕ ಅಬೂಬಕ್ಕರ್ ಸಿದ್ದೀಕ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಜಯಪ್ರಕಾಶ್ ಧನ್ಯವಾದ ಸಲ್ಲಿಸಿದರು.

LEAVE A REPLY

Please enter your comment!
Please enter your name here