ಅಪಘಾತದಲ್ಲಿ ಗಂಭೀರ ಗಾಯಗೊಂಡ ಮಂಚ ಗುರಿಪಳ್ಳ ಅವರಿಗೆ ವಾಟರ್ ಬೆಡ್ ಹಸ್ತಾಂತರ

0

ಬೆಳ್ತಂಗಡಿ: ಉಜಿರೆಯಲ್ಲಿ ರಸ್ತೆ ದಾಟುತಿದ್ದ ಸಂದರ್ಭದಲ್ಲಿ ಬಸ್ಸು ಡಿಕ್ಕಿ ಹೊಡೆದು ಗುರಿಪಳ್ಳ ನಿವಾಸಿ ಮಂಚ ಮುಗೇರ ಅವರಿಗೆ ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಬೆಳ್ತಂಗಡಿಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಭೇಟಿಯಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಅವರು ಆರೋಗ್ಯ ವಿಚಾರಿಸಿ, ವಾಟರ್ ಬೆಡ್ ಹಸ್ತಾಂತರಿಸಿದರು.

ವೈದ್ಯರಿಂದ ರೋಗಿಯ ಆರೋಗ್ಯದ ಬಗ್ಗೆ ವಿಚಾರಿಸಿ ಮಾಹಿತಿ ಪಡೆದುಕೊಂಡರು. ಪತ್ನಿ ಗಿರಿಜಾ, ಮಗ ಶ್ರೀ ಲೋಕನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ನಾಗೇಶ್ ಎಂ., ಯುವ ವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ, ಕುಟುಂಬ ಸದಸ್ಯರಾದ ಪ್ರವೀಣ, ಹರೀಶ್, ಸರಸ್ವತಿ ಜಗದೀಶ್, ಪ್ರಮುಖರಾದ ಬೆಳ್ತಂಗಡಿ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಸೌಮ್ಯ ಲಾಯಿಲ, ಗ್ರಾಮೀಣ ಬ್ಲಾಕ್ ಕಿಸಾನ್ ಘಟಕದ ಅಧ್ಯಕ್ಷರಾದ ಯಶೋದರ ಗೌಡ ಕೊಡ್ಡೋಳು, ಕೇಶವ ಎಂ. ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here