ಭಾರತ-ನ್ಯೂಜಿಲೆಂಡ್ ಕ್ರಿಕೆಟ್ ಪಂದ್ಯಕ್ಕೆ ಶಶಿ ಕ್ಯಾಟರಿಂಗ್ ಆತಿಥ್ಯ-ಗುರುವಾಯನಕೆರೆ ಮೂಲದ ಉದ್ಯಮಿ ಶಶಿಧರ ಶೆಟ್ಟಿರ ಮುಕುಟಕ್ಕೆ ಮತ್ತೊಂದು ಗರಿ

0

ಬೆಳ್ತಂಗಡಿ : ಸಾಮಾಜಿಕ, ಧಾರ್ಮಿಕ ಸೇರಿದಂತೆ ನಾನಾ ಕ್ಷೇತ್ರಗಳಿಗೆ ಕೊಡುಗೆ ನೀಡುತ್ತಾ ಸಮಾಜದಲ್ಲಿ ಗುರುತಿಸಿಕೊಂಡಿರುವ ಉದ್ಯಮಿ ಗುರುವಾಯನಕೆರೆಯ ಶಶಿಧರ ಶೆಟ್ಟಿ ಬರೋಡಾ ಅವರು ಜ.೧೧ರಂದು ವಡೋದರಾ (ಬರೋಡಾ) ಕೋಟಂಬಿಯ ಬರೋಡಾ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆದ ಭಾರತ ವಿರುದ್ಧ ನ್ಯೂಜಿಲೆಂಡ್ ತಂಡಗಳ ಪ್ರಥಮ ಏಕದಿನ ಕ್ರಿಕೆಟ್ ಪಂದ್ಯಾವಳಿಗೆ ತಮ್ಮ ಶಶಿ ಕ್ಯಾಟರಿಂಗ್ ಸರ್ವಿಸಸ್ ಮೂಲಕ ಆತಿಥ್ಯ ಸೇವೆ ಒದಗಿಸಿ ಗಮನಸೆಳೆದಿದ್ದಾರೆ.

ಗುಜರಾತಿನ ಬರೋಡದಲ್ಲಿ ನಡೆಸುತ್ತಿ ರುವ ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ದೇಶದಲ್ಲಿನ ಪ್ರಮುಖ ಕ್ಯಾಟರಿಂಗ್ ಸೇವೆ ಒದಗಿಸುವ ಸಂಸ್ಥೆಯಾಗಿ ಬೆಳೆದಿದೆ. ಪ್ರಮುಖವಾಗಿ ಕೈಗಾರಿಕಾ, ಕಾರ್ಪೊರೇಟ್ ಮತ್ತು ದೊಡ್ಡ ಪ್ರಮಾಣದ ಕಾರ್ಯಕ್ರಮಗಳಿಗೆ ಆಹಾರ ಪೂರೈಕೆ ಮಾಡುತ್ತಾ ಬಂದಿದೆ. ಬರೋಡದಲ್ಲಿ ಹೆಸರಾಂತ ತುಳು-ಕನ್ನಡಿಗ ಉದ್ಯಮಿಯಾಗಿ ಗುಜರಾತ್ ತುಳು ಸಂಘದ ಅಧ್ಯಕ್ಯರಾಗಿರುವ ಶಶಿಧರ ಶೆಟ್ಟಿ ಬರೋಡಾರ ಶಶಿ ಕ್ಯಾಟರಿಂಗ್ ಅಂತರ ರಾಷ್ಟ್ರೀಯ ಮಟ್ಟದ ಖ್ಯಾತಿ ಪಡೆದ ಹಾಗೂ ಪ್ರತಿಷ್ಠಿತ ಕ್ರೀಡಾಕೂಟಕ್ಕೆ ಅತ್ಯುನ್ನತ ಮಟ್ಟದ ಆತಿಥ್ಯ ಸೇವೆ ನೀಡಿದ್ದು, ಇದಕ್ಕಾಗಿ ಸಂಸ್ಥೆಯ ೧೫೦ಕ್ಕೂ ಹೆಚ್ಚು ತರಬೇತಿ ಪಡೆದ ಅನುಭವಿ ಸಿಬ್ಬಂದಿಗಳನ್ನು ನಿಯೋಜಿಸಿತ್ತು.

ಸುಮಾರು ಎರಡುವರೆ ದಶಕಗಳಿಂದ ಗುಜರಾತ್‌ನ ಬರೋಡದಲ್ಲಿ ಶಶಿ ಕ್ಯಾಟರಿಂಗ್ ಸಂಸ್ಥೆಯನ್ನು ನಡೆಸುತ್ತಿರುವ ಶಶಿಧರ್ ಶೆಟ್ಟಿ ಬರೋಡರು ಸು ಫ್ರ ಸೋ ಸಿನಿಮಾದ ನಿರ್ಮಾಪಕರೂ ಹೌದು. ಶಶಿ ಕ್ಯಾಟರಿಂಗ್ ಸಂಸ್ಥೆ ಗುಜರಾತ್, ಹರಿಯಾಣ, ದೆಹಲಿ, ಕೊಲ್ಕತ್ತಾ, ಅಸ್ಲಾಂ, ಪಂಜಾಬ್, ಮಧ್ಯಪ್ರದೇಶ, ರಾಜಸ್ಥಾನ, ಕರ್ನಾಟಕ ಹಾಗೂ ದೇಶದ ಹಲವು ಭಾಗಗಳಲ್ಲಿ ತಮ್ಮ ಸೇವೆಯನ್ನು ಒದಗಿಸುತ್ತಿದೆ.
ಬರೋಬ್ಬರಿ ೧೫ ವರ್ಷಗಳ ನಂತರ ವಡೋದರಾದಲ್ಲಿ ಏಕದಿನ ಪಂದ್ಯ ನಡೆದಿದ್ದು, ಇದರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಗೆದ್ದಿರುವುದು ಮತ್ತೊಂದು ಸಂತೋಷದ ವಿಷಯವಾದರೂ, ಈ ಪಂದ್ಯಾಟಕ್ಕೆ ಬೆಳ್ತಂಗಡಿಯ ಶಶಿಧರ್ ಶೆಟ್ಟಿ ಬರೋಡಾರ ಕ್ಯಾಟರಿಂಗ್ ವ್ಯವಸ್ಥೆ ಕಲ್ಪಿಸಿದ್ದು ತಾಲೂಕಿನ ಮಟ್ಟಿಗೆ ಹೆಮ್ಮೆಯ ವಿಷಯ.

ಭಾರತ ಹಾಗೂ ನ್ಯೂಜಿಲ್ಯಾಂಡ್ ಪ್ರಥಮ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ನಮ್ಮ ಕ್ಯಾಟರಿಂಗ್ ಸೇವೆ ನೀಡಿರುವುದು ಅತೀವ ಖುಷಿ ಕೊಟ್ಟಿದೆ. ಆತಿಥ್ಯ ಸ್ವೀಕರಿಸಿದ ಪ್ರತಿಯೊಬ್ಬರೂ ಶುಚಿ ಹಾಗೂ ರುಚಿಯನ್ನು ಹೊಗಳಿದ್ದಾರೆ. ಇದರಿಂದಾಗಿ ಮುಂದೆ ಇಲ್ಲಿ ನಡೆಯುವ ಯಾವುದೇ ಪಂದ್ಯಕ್ಕೂ ನಮ್ಮ ಕ್ಯಾಟರಿಂಗ್ ಸೌಲಭ್ಯ ಪಡೆಯಲು ಮುಂದಾಗುತ್ತಾರೆ ಎನ್ನುವ ಭರವಸೆ ಇದೆ.
ಶಶಿಧರ್ ಶೆಟ್ಟಿ ಬರೋಡ ಮಾಲಕರು, ಶಶಿ ಕ್ಯಾಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್

LEAVE A REPLY

Please enter your comment!
Please enter your name here