ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವೇಣೂರು ಎಕ್ಸೆಲ್ ಟೆಕ್ನೋ ಸ್ಕೂಲ್ ಶೇ. 100 ಫಲಿತಾಂಶ

0

ವೇಣೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ( ಇತರೆ ಪರೀಕ್ಷೆಗಳು ) ನಡೆಸಿದ ಹೈಯರ್ ಗ್ರೇಡ್ ಡ್ರಾಯಿಂಗ್ ಪರೀಕ್ಷೆಯಲ್ಲಿ ವೇಣೂರಿನ ಎಕ್ಸೆಲ್ ಟೆಕ್ನೋ ಸ್ಕೂಲ್ ಇದರ ಎಲ್ಲಾ ಚಿತ್ರ ಕಲಾ ವಿದ್ಯಾರ್ಥಿಗಳು ತೇರ್ಗಡೆಯಾಗುವುದರೊಂದಿಗೆ ಶಾಲೆಯು ಶೇಕಡಾ 100 ಫಲಿತಾಂಶವನ್ನು ದಾಖಲಿಸಿಕೊಂಡಿದೆ.

ಪುಂಜಾಲಕಟ್ಟೆ ಪಬ್ಲಿಕ್ ಸ್ಕೂಲ್ ಇಲ್ಲಿ ಆಯೋಜಿಸಿದ್ದ ಮೂರು ದಿನಗಳ ಈ ಪರೀಕ್ಷೆಗೆ, ಸಂಸ್ಥೆಯಿಂದ ಒಟ್ಟು 42 ವಿದ್ಯಾರ್ಥಿಗಳು ಹಾಜರಾಗಿದ್ದು, ಇವರುಗಳಲ್ಲಿ 10ನೇ ತರಗತಿಯ ನಸೀಬಾ ಸುಲ್ತಾನ್ (473) ಮತ್ತು ಆರ್. ಲಾವಣ್ಯ (428 ) 9ನೇ ತರಗತಿಯ ವಿದ್ಯಾರ್ಥಿಗಳಾದ ಕ್ಷಮಾ ಎಂ. ಎಸ್ (451) , ಕೃತಿಕಾ (442), ಮತ್ತು ಬದ್ರಿನಾಥ್ ಸಿ.ಪಿ ( 427 ) ಅಂಕ ಪಡೆದು ಡಿಸ್ಟಿಂಕ್ಷನ್ ಶ್ರೇಣಿಯಲ್ಲಿ ಹಾಗೂ ಉಳಿದ 37 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಇವರಿಗೆ ಸಂಸ್ಥೆಯ ಚಿತ್ರಕಲಾ ಶಿಕ್ಷಕಿ ನಮನ ಕೆ.ಎಸ್ ಮತ್ತು ಕಂಪ್ಯೂಟರ್ ಶಿಕ್ಷಕಿ ವಿಂಧ್ಯಾ‌ ಯು ತರಬೇತಿ ನೀಡಿದ್ದು, ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಬಿ, ಆಡಳಿತಾಧಿಕಾರಿ ಶಾಂತಿರಾಜ್ ಜೈನ್ ಮತ್ತು ಮುಖ್ಯ ಶಿಕ್ಷಕಿ ಸುಜಾತ. ಬಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here