ಶಿಬರಾಜೆ: ಹಿರಿಯ ನಾಟಿ ವೈದ್ಯ ರಮಾನಾಥ ರೈ ಗೆ 75 ರ ಸಂಭ್ರಮ-ಅಯ್ಯಪ್ಪನ ಸನ್ನಿಧಿಯಲ್ಲಿ ಶಿಷ್ಯ ವೃಂದದಿಂದ ಹುಟ್ಟುಹಬ್ಬ ಆಚರಣೆ-ಸತತ 40ವರ್ಷದಿಂದ ಅಯ್ಯಪ್ಪನ ದರ್ಶನ ಮಾಡುತ್ತಿರುವ-ರೈ

0

ಶಿಬರಾಜೆ: ಇಲ್ಲಿಯ ಹಿರಿಯ ನಾಟಿ ವೈದ್ಯ ರಮಾನಾಥ ರೈ ಸತತ 40ವರ್ಷದಿಂದ ಅಯ್ಯಪ್ಪ ವೃತ ಆಚರಣೆ ಮಾಡಿ ಶಬರಿಮಲೆ ಸನ್ನಿಧಿ ಗೆ ತನ್ನ ಶಿಷ್ಯ ವೃಂದದ ಜೊತೆ ತೆರಳಿ ದರ್ಶನ ಪಡೆಯುತ್ತಾರೆ.

ಈ ಬಾರಿ ಅಯ್ಯಪ್ಪ ದೇವರ ಸನ್ನಿಧಿಯಲ್ಲಿ ಅವರ ಶಿಷ್ಯ ವೃಂದ ಗುರುಗಳ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿ ಗುರುಗಳ ಆಶೀರ್ವಾದ ಪಡೆದುಕೊಂಡಿದ್ದಾರೆ.

ಅವರು ಬೆಳ್ತಂಗಡಿ ತಾಲೂಕಿನಲ್ಲಿ ಚಿರಪರಿಚಿತ ನಾಟಿ ವೈದ್ಯರಾಗಿದ್ದು ಕಿಡ್ನಿ ಸ್ಟೋನ್ ಗೆ ಔಷಧಿ ನೀಡುವುದರಲ್ಲಿ ಎತ್ತಿದ ಕೈ. ರಾಜ್ಯದ ವಿವಿಧ ಕಡೆಗಳಿಂದಲೂ ಇವರ ಔಷಧಿಯನ್ನು ಹುಡುಕಿಕೊಂಡು ಬರುವವರು ಅನೇಕರಿದ್ದಾರೆ. ಕಿಡ್ನಿ ಸ್ಟೋನ್ ಅಲ್ಲದೆ ಇನ್ನು ಹಲವಾರು ಸಮಸ್ಯೆಗಳಿಗೆ ನಾಟಿ ಔಷದಿ ನೀಡುತ್ತಾ ಬರುತ್ತಿದ್ದಾರೆ.

ಅವರ ಸತತ 40ವರ್ಷದ ಶಬರಿಮಲೆ ಯಾತ್ರೆಯಲ್ಲಿ ಅನೇಕ ಶಿಷ್ಯ ಬಳಗವನ್ನು ಹೊಂದಿದ್ದು ಈ ಬಾರಿಯ ಹುಟ್ಟುಹಬ್ಬ ಆಚರಣೆ ಸಂಧರ್ಭದಲ್ಲಿ ಶಿಷ್ಯಂದಿರಾದ ಯೋಗೀಶ್ ಹೆಬ್ರಿ, ವಿಶ್ವನಾಥ ಶೆಟ್ಟಿ ಪೆರ್ಲ, ವೆಂಕಪ್ಪ ಗೌಡ ಪೆರ್ಲ, ಶಿವ ರಾಮ ಅರಸಿನಮಕ್ಕಿ, ದೀಕ್ಷಿತ್ ರೈ ಪೆರ್ಲ, ಜಯೇಶ್, ಪುನೀತ್ ಪೆರ್ಲ, ಯಕ್ಷಿತ್ ಶಿಬರಾಜೆ, ದೀಕ್ಷಿತ್ ಶಿಬರಾಜೆ, ಸುದೀಪ್ ಪಟ್ರಮೆ, ಸುನೀತ್ ಪೆರ್ಲ, ರಾಮಣ್ಣ ಪೂಜಾರಿ ಪೆರ್ಲ, ಯೋಗೀಶ ತಂಬ್ಲಾಜೆ, ಸೋಮ ಶೇಖರ ಪೆರ್ಲ, ನಿತೇಶ್ ಅರಸಿನಮಕ್ಕಿ, ಹರೀಶ ಅರಸಿನಮಕ್ಕಿ, ಸುಧಾಕರ, ಬೇಬಿ ಪೆರ್ಲ, ವಿನಯ್ ಶಿಬರಾಜೆ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here