ವೇಣೂರು: ಅರೆಪ್ರಜ್ಞೆ ಸ್ಥಿತಿಯಲ್ಲಿ ಚಿರತೆ ಪತ್ತೆ

0

ವೇಣೂರು: ನೈನಾಡಿನ ಸ್ನೇಹಗಿರಿ ಪರಿಸರದ ಸಮೀಪದ ಕಾಡಿನಲ್ಲಿ ಚಿರತೆಯೊಂದು ಅರೆಪ್ರಜ್ಞೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಚಿಕಿತ್ಸೆಗೆ ಒಳಪಡಿಸಿದ್ದು, ಚಿರತೆ ಚೇತರಿಸಿಕೊಂಡಿದೆ.
ಸ್ಥಳೀಯರ ಮಾಹಿತಿ ಮೇರೆಗೆ ವೇಣೂರು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದು, ಪರಿಶೀಲನೆ ನಡೆಸಿ ಅರವಳಿಕೆ ನೀಡಿ ಚಿಕಿತ್ಸೆಗಾಗಿ ಚಿರತೆಯನ್ನು ಕೊಂಡೊಯ್ಯಲಾಗಿದೆ.

ನೈನಾಡು, ಹೊಸಪಟ್ಣ ವ್ಯಾಪ್ತಿಯಲ್ಲಿ ಚಿರತೆಯ ಓಡಾಡುವಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಯ ಅಧಿಕಾರಿಗಳು ಸ್ಥಳೀಯರ ಸಹಕಾರದೊಂದಿಗೆ ಚಿರತೆ ಹಿಡಿಯುವ ಬೋನನ್ನು ಸ್ನೇಹಗಿರಿ ಪರಿಸರದ ವ್ಯಾಪ್ತಿಯಲ್ಲಿ ಅಳವಡಿಸಲಾಗಿತ್ತು.

ಬೋನು ಅಳವಡಿಸಲು ನೈನಾಡು ಶ್ರೀ ರಾಮ ಯುವಕ ಸಂಘ ದ ಸದಸ್ಯರುಗಳಾದ ಶೇಖರ ಕಲ್ಲು, ಪ್ರಶಾಂತ್ ಕಲ್ಲು, ಗಣೇಶ್ ಮಿತ್ತಬೆಟ್ಟು, ಚಂದ್ರಹಾಸ ಅಚ್ಚಿನಡ್ಕ, ಚಂದ್ರ ಬೆಂಚಿನಡ್ಕ, ರಿಯಾಜ್ ಸ್ನೇಹಗಿರಿ, ಖಿಲ್ ಕುಮಂಗಿಲ ಮುಂತಾದವರು ಸಹಕಾರ ನೀಡಿದ್ದರು.

LEAVE A REPLY

Please enter your comment!
Please enter your name here