






ಬೆಳ್ತಂಗಡಿ: ಕಾಶಿಪಟ್ಲ 24*7 ನೀರು ಪೂರೈಕೆ ಗ್ರಾಮ ಘೋಷಣೆ, ಜಲ ಜೀವನ್ ಮಿಷನ್ ಕಾಮಗಾರಿ ಮತ್ತು ಗ್ರಾಮ ಪಂಚಾಯತ್ ಬಯಲು ಸಭಾಭವನ ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘದ ಆವರಣದ ಮೇಲ್ಬಾವಣಿ ಲೋಕಾರ್ಪಣೆ ಸಮಾರಂಭ ಜ.21ರಂದು ಕಾಶಿಪಟ್ಟ ಗ್ರಾಮ ಪಂಚಾಯತ್ ವಠಾರದಲ್ಲಿ ನಡೆಯಲಿದೆ.


ಕಾಶಿಪಟ್ಟ ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಕಾಶಿಪಟ್ಟ ಅಧ್ಯಕ್ಷತೆಯಲ್ಲಿ, ಶಾಸಕರು, ರಾಜ್ಯ ಸಚಿವರು, ಸಂಸದರು, ವಿಧಾನ ಪರಿಷತ್ ಸದಸ್ಯರು, ವಿವಿಧ ನಿಗಮದ ಅಧ್ಯಕ್ಷರು, ವಿವಿಧ ಇಲಾಖೆಯ ಅಧಿಕಾರಿಗಳು, ಗಣ್ಯರು, ಪಂಚಾಯತ್ ಆಡಳಿತ ಮಂಡಳಿಯ ಉಪಸ್ಥಿತಿಯಲ್ಲಿ ನೆರವೇರಲಿದೆ.









