ಬಾಲಕ ಸುಮಂತ್‌ ಶವ ಪತ್ತೆ ಪ್ರಕರಣ: ಘಟನಾ ಸ್ಥಳಕ್ಕೆ ಐ.ಜಿ.ಪಿ, ಎಸ್.ಪಿ. ಭೇಟಿ

0

ಬೆಳ್ತಂಗಡಿ: ನಾಳ ದೇವಸ್ಥಾನದ ಬೆಳಗ್ಗಿನ ಧನುಪೂಜೆಗೆಂದು ಮನೆಯಿಂದ ಹೊರಟ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿ ಸುಮಂತ್ ನಿಗೂಢ ನಾಪತ್ತೆಯಾಗಿ ಹುಡುಕಾಟದ ನಂತರ ತೋಟದ ಬಾವಿಯಲ್ಲಿ ಶವ ಜ.14ರಂದು ಪತ್ತೆಯಾಗಿತ್ತು. ಇದೀಗ ಘಟನಾ ಸ್ಥಳಕ್ಕೆ ಪಶ್ಚಿಮ ವಲಯ ಐ.ಜಿ.ಪಿ ಯವರು ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದರು. ಮೃತ ಬಾಲಕನ ಮನೆಯವರೊಂದಿಗೂ ಮಾತುಕತೆ ನಡೆಸಿದರು.

ಎಸ್ಪಿ ಡಾ.ಅರುಣ್ ಕೆ, ಡಿವೈಎಸ್ಪಿ ರೋಹಿನಿ ಸಿ.ಕೆ., ಇನ್ಸ್‌ಪೆಕ್ಟರ್ ಸುಬ್ಬಾಪುರ್ ಮಠ, ಎಸ್‌ಐ ಆನಂದ್ ಎಂ, ಧಾರ್ಮಿಕ ಮುಖಂಡ ಕಿರಣ್ ಚಂದ್ರ, ಅರಣ್ಯ ಇಲಾಖೆ ತ್ಯಾಗರಾಜ್ ಹಾಗೂ ಇಲಾಖೆಯ ಸಿಬ್ಬಂದಿ ಸ್ಥಳದಲ್ಲಿದ್ದರು. ಆರಂಭದಲ್ಲಿ ಪ್ರಕರಣದ ಬಗ್ಗೆ ಹಲವಾರು ಅನುಮಾನಗಳು ವ್ಯಕ್ತವಾಗುತ್ತಿದ್ದರೂ ಪ್ರಾಥಮಿಕ ತನಿಖೆಯಲ್ಲಿ ಇದೊಂದು ಕೊಲೆ ಪ್ರಕರಣ ಎಂದು ಬಹುತೇಕ ಕಂಡು ಬರುತ್ತಿದ್ದು, ಈ ಹಿನ್ನಲೆಯಲ್ಲಿ ಪೊಲೀಸ್ ಅಧಿಕಾರಿಗಳು ತೀವ್ರ ತನಿಖೆ ಆರಂಭಿಸಿದ್ದಾರೆ. ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.

LEAVE A REPLY

Please enter your comment!
Please enter your name here