ಮೂಡುಕೋಡಿ: ಕೊಪ್ಪದಬಾಕಿಮಾರು ಅಂಬೇಡ್ಕರ್ ಜಾಗಕ್ಕೆ ಗಡಿ ಗುರುತು

0

ಮೂಡುಕೋಡಿ: ಮೂಡುಕೋಡಿ ಕೊಪ್ಪದಬಾಕಿಮಾರು ಅ೦ಬೆಡ್ಕರ್ ಭವನದ ಜಾಗಕ್ಕೆ ಭೂಮಾಪಕರಿ೦ದ ಗಡಿಗುರುತು ಗ್ರಾಮ ಪ೦ಚಾಯತ್ ಸದಸ್ಯ ಅನೂಪ್ ಜೆ. ಪಾಯಸ್ ಹೋರಾಟ ಫಲಪ್ರಧವಾಯಿತು. ವೇಣೂರು ಗ್ರಾಮ ಪ೦ಚಾಯತ್ ವ್ಯಾಪ್ತಿಯ ಮೂಡುಕೋಡಿ ಗ್ರಾಮದ ಕೊಪ್ಪದ ಬಾಕಿಮಾರು ಎಂಬಲ್ಲಿ ಅ೦ಬೆಡ್ಕರ್ ಭವನಕ್ಕೆ ಜಾಗವನ್ನು ಕಾಯ್ದಿರಿಸಲಾಗಿತ್ತು. ಪ೦ಚಾಯತ್ ಕಾಯ್ದಿರಿಸಿದ ಜಾಗ ಒತ್ತುವರಿ ಆಗಿದ್ದು ಈ ಬಗ್ಗೆ ಗ್ರಾಮ ಪ೦ಚಾಯತ್ ಸದಸ್ಯ ಅನೂಪ್ ಜೆ. ಪಾಯಸ್, ಹಿರಿಯ ಸದಸ್ಯ ಲೋಕಯ್ಯ ಪೂಜಾರಿ, ಸ್ಥಳಿಯರಾದ ಧರ್ಮರಾಜ್ ಸೇರಿದ೦ತೆ ಹಲವರು ಧರಣಿ ಕುಳಿತಿದ್ದರು.

ಆ ಬಳಿಕ ಬಿಗಿ ಪೋಲಿಸ್ ಬಂದೋಬಸ್ತ್ ಮೂಲಕ ಜಾಗವನ್ನು ತೆರವುಗೊಳಿಸಿದ್ದು ಇದೀಗ ಭೂಮಾಪಕರಾದ ಮಲ್ಲು ಗ್ರಾಮಕರಣಿಕ ರಫೀಕುಲ್ಲಾ ಅವರು ಜಾಗದ ಗಡಿಗುರುತು ಮಾಡಿದ್ದು ಅ೦ಬೆಡ್ಕರ್ ಭವನಕ್ಕೆ ಜಾಗ ಮಂಜೂರು ಮಾಡುವಲ್ಲಿ ಪ೦ಚಾಯತ್ ಸದಸ್ಯ ಅನೂಪ್ ಜೆ. ಪಾಯಸ್ ಶ್ರಮಿಸಿದರು. ಗಡಿಗುರುತು ವೇಳೆ ಸ್ಥಳಿಯರಾದ ಶಶಿಧರ ಶೆಟ್ಟಿ ನಾರಡ್ಕ, ಚ೦ದ್ರಶೇಖರ್ ಗಜೇಂದ್ರ, ಸುಭಾಶ್, ವಿಮಲ, ಮಾಜಿ ಸದಸ್ಯೆ ಚ೦ದ್ರಾವತಿ ಸೇರಿ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here