ಮುಂಡಾಜೆ: ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮ

0

ಮುಂಡಾಜೆ: ಸರಸ್ವತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜ.10ರಂದು ಸಪ್ತಶಕ್ತಿ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಮಾತೆಯರನ್ನು ಅರಿಶಿನ, ಕುಂಕುಮ, ಹೂ, ಬೆಲ್ಲ, ನೀರನ್ನು ಕೊಟ್ಟು ಸತ್ಕರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಬರಮಾಡಿಕೊಳ್ಳಲಾಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ತದನಂತರ ವಿದ್ಯಾರ್ಥಿಗಳಿಂದ ಸರಸ್ವತಿ ವಂದನೆ ನಡೆಯಿತು.

ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಯನ್ನು ನೆರೆದಿದ್ದ ಮಾತೆಯರಿಗೆ ರೇವತಿ ಮಾತಾಜಿ ಹೇಳಿಕೊಟ್ಟರು. ವಿದ್ಯಾವತಿ ಮಾತಾಜಿ ಸಪ್ತಶಕ್ತಿ ಸಂಗಮ ಕಾರ್ಯಕ್ರಮದ ಅತಿಥಿಗಳನ್ನು ಸ್ವಾಗತಿಸಿದರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಸಂಸ್ಕಾರ ವಿಭಾಗ ಮುಖ್ಯಸ್ಥೆ ಭಗಿನಿ ಮೀನಾಕ್ಷಿ ಮಾತಾಜಿ, ಮಾತೆಯರಿಗೆ ಕುಟುಂಬದ ಅರಿವು, ಪರಿಸರದ ಮಹತ್ವ, ಸಪ್ತಶಕ್ತಿ ಸಂಗಮದ ಆದರ್ಶಗಳನ್ನು ವಿವರಿಸಿದರು.

ವಿದ್ಯಾರ್ಥಿನಿಯರಾದ ವಲ್ಲರಿ ಮತ್ತು ಸುಭೀಕ್ಷಾ ಅವರು ವೀರಮಾತೆಯರ ವೇಷದಲ್ಲಿ ಅವರ ಸಂದೇಶಗಳನ್ನು ಕಾರ್ಯಕ್ರಮದಲ್ಲಿ ಪರಿಚಯಿಸಿದರು. ಮಾತೆಯರಿಗೆ ಪುರಾಣ ಗ್ರಂಥಗಳ ರಸಪ್ರಶ್ನೆ ಕಾರ್ಯಕ್ರಮವನ್ನು ಶಿಕ್ಷಕಿ ಭವ್ಯ ಮಾತಾಜಿ ನಡೆಸಿಕೊಟ್ಟರು. ನಾಟಿ ವೈದ್ಯೆ ಸೇಸಮ್ಮ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಅಧ್ಯಕ್ಷ ಸ್ಥಾನದಲ್ಲಿ ಉಪಸ್ಥಿತರಿದ್ದ ಶಾಲಾ ಆಡಳಿತ ಮಂಡಳಿಯ ಸದಸ್ಯೆ ರೇವತಿ ಮಾತಾಜಿಯವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಪ್ತಶಕ್ತಿ ಸಂಗಮದ ಸಂಕಲ್ಪವನ್ನು ಭವ್ಯ ಓದಿಸಿದರು. ಮತ್ತು ಸನ್ಮಾನ ಪತ್ರವನ್ನು ವಾಚಿಸಿದರು. ಕಾರ್ಯಕ್ರಮವನ್ನು ಶಿಕ್ಷಕಿ ಭವ್ಯ ಮಾತಾಜಿಯವರು ನಿರೂಪಿಸಿದರು. ವೇದಿಕೆಯಲ್ಲಿ ಶಾಲೆಯ ಮುಖ್ಯ ಮಾತಾಜಿ ಚಂದ್ರಮತಿ ಮತ್ತು ಶ್ರೀಜಾರವರು ಉಪಸ್ಥಿತರಿದ್ದರು. ಶಿಕ್ಷಕಿ ಕೌಶಲ್ಯ ಮಾತಾಜಿ ವಂದಿಸಿದರು.

LEAVE A REPLY

Please enter your comment!
Please enter your name here