








ಮುಂಡಾಜೆ: ಉಜಿರೆ ರಬ್ಬರ್ ಸೊಸೈಟಿಯ ಉಪಾಧ್ಯಕ್ಷರಾಗಿರುವ ಅನಂತ್ ಭಟ್ ಮಚ್ಚಿಮಲೆಯವರ ರಬ್ಬರ್ ತೋಟದಲ್ಲಿ ನಾಲ್ಕು ಚಿರತೆಗಳು ಪತ್ತೆಯಾಗಿದ್ದು, ಮುಂಡಾಜೆಯ ಜನರಲ್ಲಿ ಆತಂಕ ಮೂಡಿಸಿದೆ. ರಬ್ಬರ್ ಟ್ಯಾಪಿಂಗ್ ನ ಕಾರ್ಮಿಕರು ಚಿರತೆಗಳನ್ನು ನೋಡಿ ಕಕ್ಕಾಬಿಕ್ಕಿಯಾಗಿ ಓಡಿದ್ದು, ಅವರು ಅನಂತ್ ಭಟ್ ರವರಿಗೆ ಮಾಹಿತಿ ನೀಡಿದ್ದಾರೆ. ಒಂದು ದೊಡ್ಡ ಚಿರತೆಯ ಜೊತೆ ಮೂರು ಮರಿ ಚಿರತೆಗಳು ಪತ್ತೆಯಾಗಿದ್ದು, ಮತ್ತಷ್ಟು ಚಿರತೆಗಳು ಇರುವ ಸಾಧ್ಯತೆಯಿದೆ ಅಂತ ಅಂದಾಜಿಸಲಾಗುತ್ತಿದೆ.









