






ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ವತಿಯಿಂದ ಸ್ವ ಉದ್ಯೋಗ ಮಾಡುತ್ತಿರುವ ಸದಸ್ಯರಿಗೆ ಸ್ವಉದ್ಯೋಗ ಮತ್ತು ಸಿಡ್ಬಿ ಸಾಲದ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಲಾಯಿಲ ಗ್ರಾಮೀಣ ಶ್ರೇಷ್ಟತಾ ಕೇಂದ್ರದಲ್ಲಿ ನಡೆಸಲಾಯಿತು


ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಪ್ರಾದೇಶಿಕ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ ಸದಸ್ಯರ ಪರಿಚಯ ಮತ್ತು ಮಾಡುತ್ತಿರುವ ಸ್ವ ಉದ್ಯೋಗದ ಬಗ್ಗೆ ವಿಮರ್ಶೆ ನಡೆಸಿ ಗ್ರಾಮಾಬಿವೃದ್ಧಿ ಯೋಜನೆಯ ಹುಟ್ಟು ಹಿನ್ನಲೆ ಬಗ್ಗೆ ತಿಳಿಸುತ್ತಾ ಈಗ ಉತ್ತಮ ರೀತಿಯಲ್ಲಿ ಸ್ವಾಭಿಮಾನದಿಂದ ಬದುಕು ಸಾಗಿಸಬೇಕಾದರೆ ಗಂಡ ಹೆಂಡತಿ ಇಬ್ಬರ ದುಡಿಮೆ ಅನಿವಾರ್ಯವಾಗಿದೆ.
ಸ್ವ ಉದ್ಯೋಗಕ್ಕೆ ಬಹಳಷ್ಟು ಅವಕಾಶಗಳಿದ್ದು ಉದ್ಯೋಗವನ್ನು ಸಣ್ಣ ಮಟ್ಟದಿಂದ ಪ್ರಾರಂಭಿಸಿ ಅವಶ್ಯಕತೆ ಇದ್ದಷ್ಟು ಮಾತ್ರ ಸಾಲವನ್ನು ಪಡೆದು ಅಬಿವೃದ್ದಿ ಹೊಂದುವಂತೆ ತಿಳಿಸಿದರು. ಸಿಡ್ಬಿ ಕಾರ್ಯಕ್ರಮದ ಯೋಜನಾದಿಕಾರಿ ಪ್ರವೀಣ್ ಸಿಡ್ಬಿ ಸಾಲದ ನಿಯಮಾವಲಿ ಬಡ್ಡಿ ದರ ಮರುಪಾವತಿ ಸಿಬಿಲ್ ಸ್ಕೋರ್ ಸ್ವಉದ್ಯೋಗದ ಆಯ್ಕೆ ಬಗ್ಗೆ ಮಾಹಿತಿ ನೀಡಿದರು. ಜಿಲ್ಲೆಯ ನಿರ್ದೇಶಕ ದಿನೇಶ್ ಡಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯೋಜನಾಧಿಕಾರಿ ಯಶೋಧರ ಸ್ವಾಗತಿಸಿ, ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರಾ ವಸಂತ್ ಕಾರ್ಯಕ್ರಮ ನಿರೂಪಿಸಿದರು. ದೀಕ್ಷಿತ್ ಧನ್ಯವಾದವಿತ್ತರು.









