






ಬೆಳಾಲು: ದೊಂಪದ ಬಲಿ ಉತ್ಸವ ಸಮಿತಿಯಿಂದ ಜ. 24ರಂದು ನಡೆಯಲಿರುವ ದೊಂಪದ ಬಲಿ ಉತ್ಸವ ದ ಆಮಂತ್ರಣ ಪತ್ರಿಕೆಯನ್ನು ಬೆಳಾಲು ಗುತ್ತು ಮನೆಯಲ್ಲಿ ಜ.11ರಂದು ಬಿಡುಗಡೆಗೊಳಿಸಲಾಯಿತು.
ರಾಜನ್ ದೈವವಾದ ಕೊಡಮಣಿತಾಯ, ವ್ಯಾಘ್ರ ಚಾಮುಂಡಿ” ಕಲ್ಕುಡ ಕಲ್ಲುರ್ಟಿ ದೈವಗಳ ಉತ್ಸವ ಹಾಗೂ ಮಾರಿ ಪೂಜೆ ನಡೆಯಲಿದೆ.


ಆಮಂತ್ರಣ ಪತ್ರಿಕೆ ಬಿಡುಗಡೆಯ ಈ ಸಂದರ್ಭದಲ್ಲಿ ಪರಿವಾರ ದೈವಗಳ ಆಸ್ರಣ್ಣರ ಗಿರೀಶ್ ಬಾರಿತಾಯ ಪಾರಳ, ಸಮಿತಿಯ ಪ್ರಧಾನ ಸಂಚಾಲಕರ ಶ್ರೀನಿವಾಸ ಗೌಡ ವಕೀಲರು ಶ್ರೀ ಸೌಧ, ಗೌರವಾಧ್ಯಕ್ಷ ಸೂರಪ್ಪ ಗೌಡ ಭಂಡಾರಿ ಮಜಲು ಅಧ್ಯಕ್ಷ ನೀಲಯ್ಯ ಗೌಡ ಭೀಮಂಡೆ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಗೌಡ ಗಣಪನ ಗುತ್ತು, ಗೌರವ ಸಲಹೆಗಾರರಾದ ಲಿಂಗಪ್ಪ ಪೂಜಾರಿ ಬನಂದೂರು, ದಿಲೀಪ್ ಕುಮಾರ್ ಜೈನ್ ಹಾಗೂ ಸಮಿತಿಯ ಪದಾಧಿಕಾರಿಗಳು ಮತ್ತು ಉಪ ಸಮಿತಿಯ ಸಂಚಾಲಕರು ಹಾಗೂ ಸದಸ್ಯರುಗಳು ಹಾಜರಿದ್ದರು.









