








ಸುಲ್ಕೇರಿ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಬ್ರಹ್ಮಗಿರಿ, ಇದರ ಗುರುಪೂಜೆಯ ಪೂರ್ವಭಾವಿ ಸಭೆಯನ್ನು ವಸಂತ ಪೂಜಾರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಫೆಬ್ರವರಿ ತಿಂಗಳಲ್ಲಿ ಗುರುಪೂಜೆ ಮಾಡುವುದೆಂದು ತೀರ್ಮಾನಿಸಿ, ಎಲ್ಲಾ ಬಿಲ್ಲವ ಭಾಂಧವರು ಭಾಗವಹಿಸಬೇಕೆಂದು ಕರೆ ನೀಡಿದರು. ಗೌರವ ಅಧ್ಯಕ್ಷ ಸುಧೀರ್ ಎಸ್. ಪಿ., ಗೌರವ ಸಲಹೆಗಾರ ಪ್ರದೀಪ್ ನಡುಮನೆ, ಕಾರ್ಯದರ್ಶಿ ಸುನಿಲ್ ಪೂಜಾರಿ, ಕೋಶಾಧಿಕಾರಿ ಪ್ರಭಾಕರ ಸಿ. ಪೂಜಾರಿ, ನಿರ್ದೇಶಕಿ ಶ್ವೇತಾ ನಾಗೇಶ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.









