






ಉಜಿರೆ: ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಹೆಗ್ಗಡೆಯವರ ಹಾಗೂ ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದಲ್ಲಿ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್
ಅವರ ಮಾರ್ಗದರ್ಶನದಲ್ಲಿ ಜ.7ರಂದು ಮಧ್ಯಾಹ್ನ 1ರವರೆಗೆ ಮೂತ್ರರೋಗ ತಪಾಸಣಾ ಶಿಬಿರ ನಡೆಯಿತು.


ಮೂತ್ರರೋಗ ತಜ್ಞರಾದ ಡಾ| ರೋಷನ್ ವಿ. ಶೆಟ್ಟಿ MBBS MS MCH (Consultant Urlogist ) ರೋಗ ತಪಾಸಣೆ ನಡೆಸಿಕೊಟ್ಟರು. ಮೂತ್ರಪಿಂಡದ ಕಲ್ಲು ತಪಾಸಣೆ, ಪ್ರೋಸ್ಟೇಟ್ ಸಂಬಂಧಿತ ಸಮಸ್ಯೆಗಳು, ಮೂತ್ರಪಿಂಡದ ವೈಫಲ್ಯ ತಪಾಸಣೆ ಮತ್ತು ಇತರ ಎಲ್ಲಾ ತರಹದ ಮೂತ್ರನಾಳ ಸಂಬಂಧಿತ ಸಮಸ್ಯೆಗಳ ತಪಾಸಣೆ ನಡೆಸಲಾಯಿತು. 60ಕ್ಕೂ ಅಧಿಕ ಮಂದಿ ಶಿಬಿರದ ಸದುಪಯೋಗ ಪಡೆದುಕೊಂಡರು.
ಈ ಶಿಬಿರದಲ್ಲಿ ವೈದ್ಯರ ಸಮಾಲೋಚನೆ ಉಚಿತವಾಗಿದ್ದು, ಪ್ರಯೋಗಾಲಯ, ರೇಡಿಯಾಲಜಿ ಮತ್ತು ಇತರೆ ಚಿಕಿತ್ಸಾ ಕ್ರಮಗಳಿಗೆ 20% ರಿಯಾಯಿತಿ ಔಷಧ ಮತ್ತು ಒಳರೋಗಿ ವಿಭಾಗದ ಶುಲ್ಕದಲ್ಲಿ 10% ರಿಯಾಯಿತಿ ನೀಡಲಾಯಿತು ಎಂದು ಆಸ್ಪತ್ರೆಯ ನಿರ್ದೇಶಕ ಎಂ. ಜನಾರ್ದನ್ ತಿಳಿಸಿದರು.









