ದಕ್ಷಿಣ ಆಫ್ರಿಕಾದಲ್ಲಿ ಮಣ್ಣಾಗಲಿದ್ದ ದಕ್ಷಿಣ ಕನ್ನಡದ ದೇಹವನ್ನು ಬೆಳ್ತಂಗಡಿ ತಲುಪಿಸಿದ ಸಂಸದ ಬ್ರಿಜೇಶ್ ಚೌಟ ಮತ್ತು ಶಾಸಕ ಹರೀಶ್ ಪೂಂಜ

4

ಬೆಳ್ತಂಗಡಿ: ತಾಲೂಕಿನ ಲಾಯಿಲ ಗ್ರಾಮದ ದಾಮೋದರ ಗೌಡ ಅವರು ಮಧ್ಯ ಆಫ್ರಿಕಾದ ಕ್ಯಾಮರೂನ್ ದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಉದ್ಯೋಗದಲ್ಲಿದ್ದರು. ಕಳೆದ ಡಿಸೆಂಬರ್ 28ರಂದು ಹೃದಯಾಘಾತದಿಂದ ನಿಧನರಾದರು.

ಆದರೆ ಗೊತ್ತು ಪರಿಚಯ ಇಲ್ಲದ ದೇಶದಿಂದ ಮೃತದೇಹ ಮನೆಗೆ ತರುವುದು ಹೇಗೆ ಎಂಬ ವೇದನೆ ಮನೆಯವರಿಗೆ. ಈ ಸಮಯದಲ್ಲಿ ನೆರವಿಗೆ ಬಂದವರು ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಬ್ರಿಜೇಶ್ ಚೌಟರು ಫೋನ್ ಕರೆಯ ಮೂಲಕ ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದಾಗ, ಕೂಡಲೇ ಸ್ಪಂದಿಸಿ ಅಲ್ಲಿನ ರಾಯಭಾರ ಕಚೇರಿ ಜೊತೆ ಸಂಪರ್ಕ ಸಾಧಿಸಿ ದೇಹವನ್ನು ಆದಷ್ಟು ಬೇಗ ಊರಿಗೆ ತಲುಪಲು ಸಹಾಯ ಮಾಡಿದರು.

ಅಲ್ಲಿನ ವೈದ್ಯಕೀಯ ವೆಚ್ಚ, ವಿಮಾನದ ವೆಚ್ಚ ಮತ್ತಿತರ ಖರ್ಚುಗಳನ್ನು ಭರಿಸಲು ಕುಟುಂಬ ಸಾದ್ಯವಾಗಲಿಲ್ಲ. ಆ ಸಮಯದಲ್ಲಿ ಅಲ್ಲಿ ನೆಲೆಸಿರುವ ಭಾರತೀಯ ಬಂಧುಗಳು ಬಹಳಷ್ಟು ಸಹಾಯಹಸ್ತ ನೀಡಿ ಸುಮಾರು ರೂ.8ಲಕ್ಷಕ್ಕೂ ಹೆಚ್ಚು ಹಣದ ಅವಶ್ಯಕತೆಯನ್ನು ನಿಭಾಯಿಸಿ ಮೃತದೇಹವನ್ನು ವಿಮಾನದ ಮೂಲಕ ಬೆಂಗಳೂರಿಗೆ ಕಳುಹಿಸಿದರು.

ಬೆಂಗಳೂರಿನಿಂದ ಪುನಃ ಅಂಬ್ಯುಲೆನ್ಸ್ ಮೂಲಕ ತರಲು ಕುಟುಂಬದವರಿಗೆ ಕಷ್ಟವಾದಾಗ ನೆರವಿಗೆ ಬಂದವರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು. ಮನೆಯವರ ಅಸಹಾಯಕತೆಯನ್ನು ಅರಿತ ಶಾಸಕರು ಅಂಬ್ಯುಲೆನ್ಸ್ ವ್ಯವಸ್ಥೆಯ ಜವಾಬ್ದಾರಿ ಹೊತ್ತರು.

4 COMMENTS

  1. Well done. Cpt Brijesh Chowta and and Shri Harish Punja. As People’s representatives you did exemplary service to the needy.

  2. ಒಂದುಕಡೆ ಬೇಜಾರು ಎದ್ದರು ಮತ್ತೊಂದು ಕಡೆ ಸಂತೋಷ da vishya ಸಚಿವರುಗಳು ಅವರ ಕರ್ತವ್ಯ ಗಳನ್ನೂ ಮಾಡಿದ್ರು

LEAVE A REPLY

Please enter your comment!
Please enter your name here