ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಉದ್ಯಮಿ ಸುರೇಶ್ ಪೂಜಾರಿ ಭೇಟಿ

0

ಬೆಳ್ತಂಗಡಿ: ಶ್ರೀ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಆದಿದೈವ ಧೂಮಾವತಿ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರಕ್ಕೆ ಮುಂಬಯಿ ಉದ್ಯಮಿ ಸುರೇಶ್ ಪೂಜಾರಿ ಭೇಟಿ ನೀಡಿ ತಾಯಿ ದೇಯಿ ಬೈದೆತಿ ದರ್ಶನ ಪಡೆದರು. ಗೆಜ್ಜೆಗಿರಿ ಕ್ಷೇತ್ರದ ಟ್ರಸ್ಟಿ ಸುರೇಶ್ ಪೂಜಾರಿಯವರ ಜೊತೆಗೆ ಮುಂಬಯಿ ಮಣಿಕಂಠ ಅಯ್ಯಪ್ಪ ಭಕ್ತವೃಂದದ ಅಯ್ಯಪ್ಪ ಮಾಲಾ ವೃತದಾರಿಗಳು ಕೂಡ ದೇವರ ದರ್ಶನ ಪಡೆದರು. ಬೆಳ್ತಂಗಡಿ ಯುವಬಿಲ್ಲವ ವೇದಿಕೆ ಅಧ್ಯಕ್ಷ ಎಮ್.ಕೆ. ಪ್ರಸಾದ್, ಸುರೇಶ್ ಪೂಜಾರಿ ಅಭಿಮಾನಿ ಬಳಗದ ವಿಶ್ವನಾಥ ಬಂಗೇರ, ಕಮಲೇಶ್ ಉಂಗಿಲಬೈಲು ಜೊತೆಯಾಗಿದ್ದರು.

LEAVE A REPLY

Please enter your comment!
Please enter your name here