ಬಳಂಜ: ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಬಳಂಜ: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಬಳಂಜ, ನಾಲ್ಕೂರು, ತೆಂಕಕಾರಂದೂರು ಗ್ರಾಮಗಳ ಕಾರ್ಯಕರ್ತರ ಸಭೆ ಹಾಗೂ ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಈ ಭಾಗದ ಹನ್ನೊಂದು ಅಭ್ಯರ್ಥಿಗಳಲ್ಲಿ ಏಳು ಅಭ್ಯರ್ಥಿಗಳು ಜಯಭೇರಿ ಬಾರಿಸಲು ಮೂಲ ಕಾರಣ ಬಳಂಜದಲ್ಲಿ ಸ್ವತಂತ್ರ ಕೃಷಿ ಪತ್ತಿನ ಸಹಕಾರ ಸಂಘ ಮಾಡುತ್ತೇವೆ ಎಂದು ಭರವಸೆ ಕೊಟ್ಟಿದ್ದರಿಂದ, ಚುನಾವಣೆಯಲ್ಲಿ ಜಯಗಳಿಸಿದ ನಂತರ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿ ಬಳಂಜದಲ್ಲಿ ಸ್ವತಂತ್ರ ಕೃಷಿ ಪತ್ತಿನ ಸಹಕಾರ ಸಂಘ ಮಾಡದೆ ಬಳಂಜ, ನಾಲ್ಕೂರು, ತೆಂಕಕಾರಂದೂರು ಗ್ರಾಮಗಳ ರೈತ ಸದಸ್ಯರುಗಳಿಗೆ ದ್ರೋಹ ಮಾಡಿದ ಆಡಳಿತ ಮಂಡಳಿ ವಿರುದ್ಧ ಉಗ್ರ ಹೋರಾಟ ಮಾಡುವ ಬಗ್ಗೆ ಇಂದಿನ ಸಭೆಯಲ್ಲಿ ತಿರ್ಮಾನ ಕೈಗೊಳ್ಳಲಾಯಿತು.

ಈ ಸಭೆಯಲ್ಲಿ ಮಾಜಿ ಬಳಂಜ ಪಂಚಾಯತ್ ಅಧ್ಯಕ್ಷ ವಿಶ್ವನಾಥ್ ಡೊಂಗ್ರೆಯವರು, ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ದೇವಿಪ್ರಸಾದ್ ಶೆಟ್ರು, ದಿನೇಶ್ ಪಿ.ಕೆ., ದೇಜಪ್ಪ ಪೂಜಾರಿ, ನಿವೃತ್ತ ಅಳದಂಗಡಿ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ CEO ಸುರೇಶ್ ಜೈನ್, ಅಳದಂಗಡಿ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸದಾನಂದ ತೋಟದಪಲ್ಕೇ, ಪಕ್ಷದ ಮುಖಂಡರುಗಳಾದ ರವಿ ಬಂಗೇರ, ಪುರಂದರ ಪೂಜಾರಿ ಪೇರಾಜೆ, ಸುಂದರ ಹೆಗ್ಡೆ, ರಮಾನಾಥ ಶೆಟ್ಟಿ ಪಂಬಾಜೆ, ಸುಧೀರ್ ಗೋಖಲೆ ಸೂಳಬೆಟ್ಟು, ವಾಸು ಪೂಜಾರಿ ರಾಮನಗರ, ಲಕ್ಷ್ಮಣ ಗೌಡ ಆಲಡ್ಕ, ಸದಾನಂದ ಪೂಜಾರಿ ಬೊಟ್ರೋಟ್ಟು, ರಮೇಶ್ ಆರ್.ಆರ್., ಮಥಾಯಿಸ್ ಕ್ರಾಸ್ತ, ವಾಲ್ಟಾರ್ ಕ್ರಾಸ್ತ, ತೋಮಸ್ ಲೋಬೋ, ರಾಮಣ್ಣ ಹೆಗ್ಡೆ ತೋಟದಪಲ್ಕೇ, ನವೀನ್ ತೋಟದಪಲ್ಕೇ, ನಾಗೇಶ್ ಬಳಂಜ, ವೃಷಭರಾಜ್ ಹೆಗ್ಡೆ, ವಸಂತ್ ಪೂಜಾರಿ, ಸತೀಶ್ ಶೆಟ್ಟಿ ರಾಮನಗರ, ವಿಶ್ವನಾಥ್ ಶೆಟ್ರು, ಅರುಣ್ ಪಿಂಟೋ, ಅರುಣ್ ಕ್ರಾಸ್ತ, ದೀಕ್ಷಿತ್ ತೋಟದಪಲ್ಕೇ, ವಿಶ್ವನಾಥ್ ಪೂಜಾರಿ ಬಾಕ್ಯರಡ್ಡ, ರಾಜು ದೇವಾಡಿಗ ಬಳಂಜ, ಓಬಯ್ಯ ದೇವಾಡಿಗ, ಮ್ಯಾಕ್ಸಿ ಕ್ರಾಸ್ತ, ನಾರಾಯಣ ಮಜ್ಜೇನಿ, ಲಕ್ಷ್ಮಣ ಪೂಜಾರಿ ಬೊಳ್ಳಜೆ, ನಿತ್ಯಾನಂದ ಹೆಗ್ಡೆ, ಸುದರ್ಶನ್ ದೇವಾಡಿಗ ಬಳಂಜ ಅವರು ಹಾಗೂ ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here