ಬೆಳ್ತಂಗಡಿ: ಜಿಲ್ಲಾ ರೈತ ತರಬೇತಿ ಕೇಂದ್ರ, ಉಜಿರೆಯ ಪ್ರೇರಣಾ ಮಹಿಳಾ ಸಂಜೀವಿನಿ ಒಕ್ಕೂಟ ಹಾಗೂ ನಡ ಅಮೃತವರ್ಷಿಣಿ ಮಹಿಳಾ ಸಂಜೀವಿನಿ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ರೈತ ತರಬೇತಿ

0

ಗುರಿಪಳ್ಳ: ಬೆಳ್ತಂಗಡಿ ಜಿಲ್ಲಾ ರೈತ ತರಬೇತಿ ಕೇಂದ್ರ, ಉಜಿರೆ ಪ್ರೇರಣಾ ಮಹಿಳಾ ಸಂಜೀವಿನಿ ಒಕ್ಕೂಟ, ನಡ ಅಮೃತವರ್ಷಿಣಿ ಮಹಿಳಾ ಸಂಜೀವಿನಿ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಒಂದು ದಿನದ ರೈತ ತರಬೇತಿಯನ್ನು ಗುರಿಪಳ್ಳ ಹಾಲು ಉತ್ಪಾದಕದ ಸಹಕಾರಿ ಸಂಘದ ಪ್ರಾಂಗಣದಲ್ಲಿ ಜ.7ರಂದು ನಡೆಸಲಾಯಿತು.

ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಉಜಿರೆಯ ಕೃಷಿ ಸಖಿ ಭಾಗೀರತಿ ಕಾರ್ಯಕ್ರಮದ ಉದ್ದೇಶ ನೈಸರ್ಗಿಕ ಕೃಷಿ ಯೋಜನೆಯ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.

ಕೃಷಿ ಅಧಿಕಾರಿ ಗಣೇಶ್ ಅವರು ಕೃಷಿ ಇಲಾಖೆಯಲ್ಲಿ ಸಿಗುವ ಸವಲತ್ತುಗಳು ಹಾಗೂ ಯೋಜನೆಗಳ ಸಂಪೂರ್ಣ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕ ಜಯಾನಂದ ಅವರು ಮಾತಾಡಿ ನಮ್ಮ ಕೃಷಿ ಸಖಿಯರು ಅಲ್ಲಲ್ಲಿ ಇಂತಹ ರೈತ ತರಬೇತಿ ಆಯೋಜನೆ ಮಾಡಿ ರೈತರಿಗೆ ವೈಜ್ಞಾನಿಕವಾಗಿ ಕೃಷಿ ಮಾಡುವ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ ನೀವೆಲ್ಲರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ಜಿಲ್ಲಾ ರೈತ ತರಬೇತಿ ಕೇಂದ್ರದ ADA ರಮೇಶ್ ತರಬೇತಿ ಕೇಂದ್ರದಲ್ಲಿ ನಡೆಯುವ ತರಬೇತಿಗಳಿಗೆ ರೈತರು ಭಾಗವಹಿಸುವಂತೆ ಮನವಿ ಮಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಪ್ರಭಾಕರ ಮಯ್ಯ ಅವರು ಅಡಿಕೆಗೆ ಬರುವ ರೋಗಗಳು ಅದರ ಪರಿಹಾರ ರೋಗ ಬರದಂತೆ ವಹಿಸಬೇಕಾದ ಮುನ್ನೆಚ್ಚರಿಕೆಗಳು ಸಾವಯವ ಕೃಷಿ ಹಾಗೂ ಅದರಿಂದ ಆಗುವ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು.

ಎರಡು ಒಕ್ಕೂಟದ ಕೃಷಿ ಸಖಿಯರಾದ ಭಾಗೀರಥಿ ಮಲ್ಲಿಕಾ ಹಾಗೂ ಪಶು ಸಖಿ ಏಕಲತಾ ಪ್ರೇಮಾ ಜೀವಾಮೃತ ಮಾಡುವ ವಿಧಾನವನ್ನು ವಿವರಿಸಿ, ಪ್ರಾತ್ಯಕ್ಷಿಕೆಯ ಮೂಲಕ ಮಾಡಿ ತೋರಿಸಿದರು. NMF ಯೋಜನೆ ಫಲಾನುಭವಿಗಳಿಗೆ ಕಿಟ್ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಗುರಿಪಳ್ಳ ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ನಮಿತಾ, ಎರಡು ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು. 85 ರೈತರು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಂಡರು.

LEAVE A REPLY

Please enter your comment!
Please enter your name here