








ಬೆಳ್ತಂಗಡಿ: ಗಯರುವಾಯನಕೆರೆ ಲಕ್ಷ್ಮಿ ಫ್ಯಾನ್ಸಿ ಅಂಗಡಿಯಲ್ಲಿ ರಾಕೇಶ್ ಎಂಬುವವರು ಪರ್ಸ್‌ಬಿಟ್ಟು ಹೋಗಿದ್ದು ಅದರಲ್ಲಿ ಅಗತ್ಯ ದಾಖಲೆ ಇರುವ ಕುರಿತು ಅಂಗಡಿ ಮಾಲೀಕರು ಸುದ್ದಿ ಬಿಡುಗಡೆಗೆ ಮಾಹಿತಿ ನೀಡಿದ್ದರು. ಈ ಕುರಿತಾಗಿ ವೆಬ್ ಸೈಟ್ ನಲ್ಲಿ ಮಾಹಿತಿ ಹಾಕಿದ ಕೆಲವೇ ಹೊತ್ತಲ್ಲಿ ಪರ್ಸ್ ವಾರಸುದಾರರು ಸುದ್ದಿ ಬಿಡುಗಡೆ ಕಚೇರಿಗೆ ಭೇಟಿ ನೀಡಿದ್ದರು. ಅವರನ್ನು ಗುರುವಾಯನಕೆರೆಯ ಲಕ್ಷ್ಮೀ ಫ್ಯಾನ್ಸಿಗೆ ಕಳುಹಿಸಲಾಗಿ ಇದೀಗ ಪರ್ಸ್ ಅವರ ಕೈ ಸೇರಿದೆ. ರಾಕೇಶ್ ಅವರು ಫ್ಯಾನ್ಸಿ ಮಾಲಕಿ ರಕ್ಷಿತಾ ಶೆಟ್ಟಿ ಹಾಗೂ ಸುದ್ದಿ ಬಿಡುಗಡೆಗೆ ಕೃತಜ್ಞತೆ ಸಲ್ಲಿಸಿದ್ದಾರೆ.









